ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಲೋಕಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಬೂತ್ ತೆರೆಯಲು ಹೊಸ ನಿಯಮ.ಪುತ್ತೂರು ಚುನಾವಣಾ ಅಧಿಕಾರಿ. ಇಲ್ಲಿದೆ ಫುಲ್ ಡೀಟೇಲ್ಸ್ 👇

Published

on

ಪುತ್ತೂರು: ಏಪ್ರಿಲ್ ೨೬ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಪ್ರತೀ ಮತಗಟ್ಟಯ ಹೊರಗೆ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ತಮ್ಮದೇ ಆದ ಬೂತ್ ತೆರೆಯಲು ಅವಕಾಶವಿದ್ದರೂ ಇದಕ್ಕೆlಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗುತ್ತವೆ ಎಂದು ಪುತ್ತೂರು ಸಹಾಯಕ ಆಯುಕ್ತರೂ, ಸಹಾಯಕ ಚುನಾವಣಾ ಅಧಿಕಾರಿಗಳೂ ಆಗಿರುವ ಜುಬಿನ್ ಮೊಹಾಪಾತ್ರ ಹೇಳಿದರು.

ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಮತಗಟ್ಟೆಯ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ. ಅದಕ್ಕಿಂತ ಹೊರಗೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಬೂತ್ ತೆರೆಯಬಹುದಾಗಿದೆ. ಆದರೆ ಒಂದು ಬೂತ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಇರಬಾರದು. ಇದ್ದಲ್ಲಿ ಚುನಾವಣಾ ಆಯೋಗದ ನಿಯಮ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.

೧೦ ಅಡಿ ಅಗಲ ಮತ್ತು ೧೦ ಅಡಿ ಉದ್ದದ ಒಂದು ಪೆಂಡಾಲ್ ಹಾಕಿ ಬೂತ್ ರಚಿಸಿಕೊಳ್ಳಬಹುದು. ಅದರ ಮೇಲೆ ಪಕ್ಷದ ಒಂದು ಧ್ವಜ, ಒಂದು ಬ್ಯಾನರ್ ಅಳವಡಿಸಬಹುದು. ಒಂದು ಟೇಬಲ್ ಹಾಕಿಕೊಂಡು ಇಬ್ಬರು ಮಾತ್ರ ಕೂರಬಹುದು. ಒಂದೇ ಕೇಂದ್ರದಲ್ಲಿ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳು (ಸೆಕ್ಟರ್ ಬೂತ್) ಇದ್ದ ಸಂದರ್ಭದಲ್ಲೂ ಪಕ್ಷಗಳ ಬೂತ್ ಒಂದಕ್ಕಿAತ ಹೆಚ್ಚು ಇರಬಾರದು. ಅಲ್ಲಿ ಜನ ಗುಂಪುಗೂಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲ ಮತದಾನ ಕೇಂದ್ರಗಳಲ್ಲಿ ಏ.೨೬ರಂದು ಮುಂಜಾನೆ ೫.೩೦ರಿಂದ ಅಣಕು ಮತದಾನ ನಡೆಯುತ್ತದೆ. ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಮ್ಮುಖ ಅಣಕು ಮತದಾನದ ಮೂಲಕ ಮತಯಂತ್ರಗಳ ಪರಿಶೀಲನೆ ನಡೆಯಲಿದೆ. ಇದಾದ ಬಳಿಕ ಇವಿಎಂ ಅನ್ನು ಮತದಾನಕ್ಕೆ ಸಜ್ಜುಗೊಳಿಸಲಾಗುವುದು. ೭ ಗಂಟೆಗೆ ಮತದಾನ ಆರಂಭಗೊಂಡು ಸಂಜೆ ೬.೩೦ರವರೆಗೆ ನಡೆಯಲಿದೆ. ಅವಧಿ ಮುಗಿಯುವ ಹಂತದಲ್ಲಿ ಮತದಾನ ಕೇಂದ್ರದಲ್ಲಿ ಇದ್ದ ಎಲ್ಲರಿಗೂ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದರು.

ಜಿಲ್ಲಾ ಚುನಾವಣಾ ಅಧಿಕಾರಿಯವರ ಆದೇಶದ ಪ್ರಕಾರ ಪ್ರತೀ ಮತಗಟ್ಟೆಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಆ ಪರಿಧಿಯಲ್ಲಿ ಕೆಂಪು ಧ್ವಜ ನೆಡಲಾಗುವುದು. ಅದರೊಳಗಿನ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ ಎಂದು ಸಹಾಯಕ ಆಯುಕ್ತರು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಹನಮ ರೆಡ್ಡಿ, ತಹಸೀಲ್ದಾರ್ ಕುಂಞ ಅಹ್ಮದ್ ಉಪಸ್ಥಿತರಿದ್ದರು.








ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಸೆಕ್ಟರ್‌ಗಳನ್ನು ಸ್ಥಾಪಿಸಲಾಗಿದೆ. ಪುತ್ತೂರು ಕ್ಷೇತ್ರದಲ್ಲಿ ೨೦ ಸೆಕ್ಟರ್‌ಗಳಿವೆ. ಪ್ರತೀ ಸೆಕ್ಟರ್‌ಗೆ ಒಬ್ಬರು ಸೆಕ್ಟರ್ ಆಫೀಸರ್ ಇದ್ದುö, ಅವರಿಗೆ ೨ ದಿನಗಳ ಕಾಲ ದಂಡಾಧಿಕಾರಿ ಅಧಿಕಾರ ನೀಡಲಾಗಿದೆ. ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ೩ ಪ್ಲೇಯಿಂಗ್ ಸ್ಕಾಡ್‌ಗಳು, ೩ ವೀಡಿಯೋ ಸರ್ವೇಲೆನ್ಸ್ ಟೀಮ್‌ಗಳು ಕೆಲಸ ಮಾಡಲಿವೆ. ಜಿಲ್ಲೆಯ ಗಡಿಯಲ್ಲಿರುವ ಚೆಕ್‌ಪೋಸ್ಟ್ಗಳಲ್ಲಿ ತಪಾಸಣೆ ಬಿಗುಗೊಳಿಸಲಾಗುವುದು ಎಂದು ಜುಬಿನ್ ಮಹಾಪಾತ್ರ ಹೇಳಿದರು.

ದಕ್ಷಿಣ ಕನ್ನಡ ಲೋಕಸಭಾಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರದ ಕೇಂದ್ರಗಳಲ್ಲಿ ಗುರುವಾರ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಪುತ್ತೂರಿನಲ್ಲಿ ತೆಂಕಿಲ ವಿವೇಕಾನಂದ ಪ್ರೌಢಶಾಲೆಯಲ್ಲಿ ನಡೆಯಲಿದೆ. ಆಯಾ ಸೆಕ್ಟರ್ ವ್ಯಾಪ್ತಿಗೆ ಒಂದರAತೆ ಅಂಕಣ ತೆರೆದು ಅದರ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳ ಎಪಿಆರ್‌ಒ ಮತ್ತು ಮೂವರು ಪಿಒ ಗಳನ್ನು ವಿಂಗಡಿಸಿ ನೀಡಲಾಗುತ್ತದೆ. ಪ್ರತೀ ಮತಗಟ್ಟೆಗೆ ಬೇಕಾಗುವ ಇವಿಎಂ, ವಿವಿಪ್ಯಾಟ್, ಮತದಾನ ಮಾಡುವ ಕಂಪಾರ್ಟ್ಮೆಂಟ್ ರಚಿಸುವ ಪರಿಕರ, ಅಳಿಸಲಾಗದ ಶಾಯಿ, ಪುಸ್ತಕ ಸಹಿತ ಸ್ಟೇಷನರಿ ವಸ್ತುಗಳು ಇತ್ಯಾದಿಗಳನ್ನು ನೀಡಿ ವಾಹನದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಮತಗಟ್ಟೆಗೆ ಕಳಿಸಿಕೊಡಲಾಗುತ್ತದೆ. ಗುರುವಾರ ಸಂಜೆಯೇ ಮತಯಂತ್ರಗಳ ಜೋಡಣೆ ಕಾರ್ಯ ಪೂರ್ಣಗೊಳ್ಳುತ್ತದೆ.

* ಪ್ರತೀ ಮತಗಟ್ಟೆಯಲ್ಲಿ ಸಿಬ್ಬಂದಿಗಳಿಗೆ ಬೇಕಾದಷ್ಟು ಕುಡಿಯುವ ನೀರು.
* ವಿದ್ಯುತ್ ವ್ಯವಸ್ಥೆ ಖಾತ್ರಿಪಡಿಸಲಾಗಿದೆ.
* ಮತಗಟ್ಟೆ ಸಿಬ್ಬಂದಿಗಳಿಗೆ ಹೆಚ್ಚುವರಿ ಕೊಠಡಿ ವ್ಯವಸ್ಥೆ ಇರಲಿದೆ.
* ಓಆರ್‌ಎಸ್, ಕುಡಿಯುವ ನೀರು, ಪ್ರಥಮ ಚಿಕಿತ್ಸೆಯ ಕಿಟ್, ಮೆಡಿಕಲ್ ಕಿಟ್, ಒದಗಿಸಲಾಗುತ್ತದೆ.
* ಪ್ರತೀ ಮತಗಟ್ಟೆಯಲ್ಲಿ ಪೊಲೀಸ್ ಭದ್ರತಾ ಸಿಬ್ಬಂದಿ ಇರುತ್ತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement