Published
8 months agoon
By
Akkare Newsಪುತ್ತೂರು: ಮಳೆ ಇಲ್ಲದೆ ಕರಾವಳಿ ಬಿಸಿ ತಾಪದಿಂದ ಕೂಡಿದ್ದು ಜನಸಂಕಷ್ಡ ಎದುರಿಸುವಂತಾಗಿದ್ದು ಶೀಘ್ರ ಮಳೆ ಪ್ರಾಪ್ತಿಗಾಗಿ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಶಾಸಕರ ಸೂಚನೆಯಂತೆ ಪರ್ಜನ್ಯ ಜಪ ನೆರವೇರಿತು. ಜಪ ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ರೈಭಾಗವಹಿಸಿ ಮಳೆ ಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಪಂಜಿಗುಡ್ಡೆ ಈಶ್ವರ ಭಟ್. ಕೋಡಿ0ಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ,ನ್ಯಾಯವಾದಿ ಜಗನ್ನಿವಾಸ್ ರಾವ್ , ರಂಜಿತ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಮಳೆ ಇಲ್ಲದೆ ಬಿಸಿಲ ತಾಪದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜನ ಬಿಸಿಲಿಗೆ ಕಂಗೆಟ್ಟಿದ್ದು ಮನೆಯಿಂದ ಹೊರಗೆ ಬರಲಾರದ ಸ್ಥಿತಿ ಇದೆ. ಕ್ಷೇತ್ರದ ಕೆಲವು ಕಡೆಗಳಲ್ಲಿಕುಡಿಯುವ ನೀರಿಗೂ ಅಭಾವ ಉಂಟಾಗಿದ್ದು ಮಳೆ ಬಂದು ಜನರ ಸಂಕಷ್ಟ ದೂರವಾಗಲೆಂದು ಪರ್ಜನ್ಯ ಜಪ ನೆರವೇರಿಸಲಾಗಿದೆ. ಮಳೆ ಬಂದು ಎಲ್ಲರಿಗೂ ಸಂತುಷ್ಟಿ ಲಭಿಸಲಿ ಅಶೋಕ್ ರೈ, ಶಾಸಕರು ಪುತ್ತೂರು