Published
8 months agoon
By
Akkare Newsಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್( ರಿ ) ಕಲ್ಲಡ್ಕ ವಲಯದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಗ್ರಾಮ ಸುಭಿಕ್ಷ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲಾ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ “ಸೀಯಾಳ ಅಭಿಷೇಕ” ನಡೆಯಿತು.
ಕಾಲಕಾಲಕ್ಕೆ ಸರಿಯಾಗಿ ಮಳೆ ಬಂದು ಉತ್ತಮ ಬೆಲೆ ಬೆಳೆದು, ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ನಡೆಯದಂತೆ, ಗ್ರಾಮದ ಜನರಿಗೆ ಉತ್ತಮ ಆರೋಗ್ಯ ನೆಮ್ಮದಿ ನೀಡುವ ಸಲುವಾಗಿ ಶ್ರೀ ನಿಟಿಲಾಕ್ಷನಿಗೆ ಸುಮಾರು 500ಕ್ಕೂ ಹೆಚ್ಚು ಸೀಯಾಳ ಅಭಿಷೇಕ ಮಾಡಲಾಯಿತು.
ಬಳಿಕ ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ಜನಜಾಗ್ರತಿ ವೇದಿಕೆಯ ಕಲ್ಲಡ್ಕ ವಲಯ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ, ಕಲ್ಲಡ್ಕ ಶೌರ್ಯ ವೀಪತು ನಿರ್ವಹಣಾ ಘಟಕ ಅಧ್ಯಕ್ಷ ಮಾಧವ ಸಾಲಿಯಾನ್ ,
ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ, ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ಒಕ್ಕೂಟಗಳ ಅಧ್ಯಕ್ಷರುಗಳು, ಸೇವಾ ಪ್ರತಿನಿಧಿಗಳು, ಸ್ವ ಸಹಾಯ ಸಂಘದ ಸದಸ್ಯರುಗಳು, ಶೌರ್ಯ ತಂಡದ ಸದಸ್ಯರುಗಳು, ಉಪಸ್ಥಿತರಿದ್ದರು.