ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ
ವಾಹನ ತರಬೇತಿ ಪರೀಕ್ಷಾ ಮೈದಾನ ವಾಹನ ತರಬೇತಿ ಶಾಲೆಯ ಮುಖ್ಯಸ್ಥರಿಂದ ಶಾಸಕರ ಭೇಟಿ ಮನವಿ ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು ಅಭಿನಂದನೆ ಸಲ್ಲಿಸಿದ ವಾಹನ ತರಬೇತಿ ಶಾಲೆಯ ಮುಖ್ಯಸ್ಥರುPublished
1 year agoon
By
Akkare Newsಪುತ್ತೂರು: ವಾಹನ ಚಾಲನೆಯ ಪರವಾನಿಗೆಗಾಗಿ ಚಾಲನಾ ಪರೀಕ್ಷೆಯನ್ನು ಇದುವರೆಗೆ ಪುತ್ತೂರಿನಲ್ಲಿಯೇ ನಡೆಲಾಗುತ್ತಿದ್ದು, ಸ್ಥಳಾವಕಾಶ ಕಡಿಮೆ ಇರುವ ಕಾರಣ ಇನ್ನು ಮುಂದೆ ಮಂಗಳೂರಿನಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿ ಇದ್ದು ಪುತ್ತೂರಿನಲ್ಲಿಯೇ ಚಾಲನಾ ಪರೀಕ್ಷೆ ನಡೆಸುವಂತೆ ಪುತ್ತೂರು, ಕಡಬ, ಸುಳ್ಯ ತಾಲೂಕಿನ ವಾಹನ ಚಾಲನಾ ತರಬೇತಿ ಶಾಲೆಯ ಮುಖ್ಯಸ್ಥರು ಪುತ್ತೂರಿನ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಇದುವರೆಗೆ ಪುತ್ತೂರಿನ ಸಾರಿಗೆ ಇಲಾಖೆಯಲ್ಲಿಯೇ ಚಾಲನಾ ಪರೀಕ್ಷೆ ನಡೆಸಲಾಗುತ್ತಿತ್ತು. ಇದನ್ನು ಮಂಗಳೂರಿಗೆ ಬದಲಾಯಿಸಿದಲ್ಲಿ ಈ ಭಾಗದ ಜನರಿಗೆ ಮಂಗಳೂರಿಗೆ ಹೋಗಿ ಬರುವುದು ಕಷ್ಟಕರವಾಗಲಿದೆ.
ಪುತ್ತೂರಿನಲ್ಲಿ ವಾಹನ ಚಾಲನಾ ಪರವಾನಿಗೆ ನೀಡುವುದಕ್ಕೆ ಮೊದಲು ಚಾಲನಾ ಪರೀಕ್ಷೆ ನಡೆಸಲು ಸರಿಯಾದ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಪುತ್ತೂರು ನಗರ ಭಾಗದಲ್ಲಿ ಟೆಸ್ಟ್ ಯಾರ್ಡ್ ನಿರ್ಮಾಣಕ್ಕೆ ಸರಕಾರಿ ಸ್ಥಳವನ್ನು ಗುರುತಿಸಿ ಸಾರಿಗೆ ಇಲಾಖೆಗೆ ಮಂಜೂರು ಮಾಡುವಂತೆ ಶಾಸಕರಿಗೆ ನೀಡಿದ ಮನವಿಯಲ್ಲಿ ಹೇಳಲಾಗಿದೆ.