Published
8 months agoon
By
Akkare Newsಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ನೆಕ್ಕಿಲಾಡಿ ಇಂದಾಜೆ ಬಳಿ ಹೊಸ ರಸ್ತೆ ನಿರ್ಮಾಣದ ವೇಳೆ ತಿರುವನ್ನು ತೆರವು ಮಾಡದೆ ರಸ್ತೆ ನಿರ್ಮಾಣ ಮಾಡಲಾಗಿದೆ. ಇಲ್ಲಿರುವ ತಿರುವನ್ನು ತೆರವು ಮಾಡಿ ನೇರ ರಸ್ತೆ ನಿರ್ಮಾಣ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗೆ ಶಾಸಕ ಅಶೋಕ್ ರೈ ಸೂಚನೆಯನ್ನು ನೀಡಿದ್ದಾರೆ.
ಪುತ್ತೂರು ಉಪ್ಪಿನಂಗಡಿ ರಸ್ತೆ ನಿರ್ಮಾಣದ ವೇಳೆ ಅಲ್ಲಿನ ತಿರುವನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದರೂ ತೆರವು ಮಾಡಿರಲಿಲ್ಲ. ಈ ಬಗ್ಗೆ ಸಾರ್ಬಜನಿಕರಿಂದ ದೂರುಗಳು ಬಂದ ಕಾರಣ ಶಾಸಕರು ಇಂಜಿನಿಯರ್ ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.