Published
7 months agoon
By
Akkare Newsಪುತ್ತೂರು :ಶಾಸಕರಾದ ಅಶೋಕ್ ಕುಮಾರ್ ರೈ ಅವರ ಕಛೇರಿಗೆ ಯಾರಾದರೂ, ನನಗೋ ನನ್ನ ಮಗ ಮಗಳಿಗೋ ಅಥವಾ ಇತರ ಯಾರಿಗಾದರೂ ಒಂದು ಕೆಲಸ ಆಗ ಬೇಕಾದರೆ ಅವರ ಬಳಿ ಹೋದರೆ ಸ್ಪಾಟಲ್ಲೇ ಅಧಿಕಾರಿಗಳಿಗೋ ಅಥವಾ ಸಂಬಂಧ ಪಟ್ಟವರಿಗೋ ಕಾಲ್ ಮಾಡಿ ಮಾತನಾಡಿ ಅಲ್ಲೇ ಇತ್ಯರ್ಥ ಪಡಿಸುವ ಒಬ್ಬ ಧಮ್ಮು ತಾಖತ್ತಿರುವ ಶಾಸಕರಾಗಿದ್ದಾರೆ ನಮ್ಮ ಅಶೋಕ್ ರೈಗಳು
ಬೇರೆಯವರ ಹಾಗೆ ನಾಳೆ ಬನ್ನಿ ನಾಡಿದ್ದು ಬನ್ನಿ ನಾನು ಕಾಲ್ ಮಾಡುತ್ತೇನೆ ಅಥವಾ ಅವರ ಎದುರೇ ಕಾಲ್ ಮಾಡಿ ನಾಟಕ ಮಾಡುವಂತಹವರಲ್ಲ.
ಏನೇ ಇದ್ದರೂ ಅಲ್ಲೇ ಡ್ರಾ ಅಲ್ಲೇ ಬಹುಮಾನ ಕೊಡುತ್ತಾರೆ ಒಂದು ವೇಳೆ ಬಂದವರ ಕೆಲಸ ಐದೋ ಹತ್ತೋ ದಿನ ಕಳೆದ ಮೇಲೆ ಆಗುವುದಾದರೆ ಅವರ ಸರಕಾರಿ ಪಿಎ ಪರ್ಸನಲ್ ಪಿಎ ಯವರಲ್ಲಿ ಅರ್ಜಿ ಕೊಟ್ಟು ಆದಷ್ಟು ಬೇಗನೇ ಮಾಡಿ ಕೊಡ್ರಪ್ಪಾ ಆದ ಕೂಡಲೇ ಅವರಿಗೆ ಕಾಲ್ ಮಾಡಿ ಕಛೇರಿಗೆ ಕರೆಸಿ ಕೊಡಿ ನಂಬರ್ ತೆಗೆದುಕೊಳ್ಳಿ ಎಂದು ಹೇಳುತ್ತಾರೆ.
ವಿನಹ ಬೇರೆ ನಾಯಕರು ಶಾಸಕರು ಎಂಪಿಯವರಂತೆ ನರಿಬುದ್ದಿ ತೋರಿಸಿ ಜನರಿಗೆ ಮೋಸ ಮಾಡಿಲ್ಲ ನಾಟಕ ಮಾಡಿಲ್ಲ ಇನ್ನು ಮುಂದಕ್ಕೂ ಮಾಡಲ್ಲ ಎಂದೆಂದೂ ನಮ್ಮ ಅಶೋಕ್ ರೈಗಳು ಮಾಡಲ್ಲ ಎಂಬ ಗ್ಯಾರಂಟಿ ಪುತ್ತೂರು ಕ್ಷೇತ್ರದ ಮತದಾರರಿಗೆ ಮನವರಿಕೆಯಾಗಿದೆ.ಇಂತಹ ಶಾಸಕರನ್ನು ಪಡೆದ ಪುತ್ತೂರು ಕ್ಷೇತ್ರ ನಿಜಕ್ಕೂ ಎಲ್ಲಾ ಕ್ಷೇತ್ರಗಳಿಗೂ ಮಾದರಿ ಕ್ಷೇತ್ರವಾಗಿದೆ.