ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಕಾಲೇಜಿನ ಸಮಗ್ರ ಅಭಿವೃದ್ದಿಗೆ ಅನುದಾನ: ಅಶೋಕ್ ರೈ

Published

on

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಮಹಿಳಾ ಪ ಪೂ ಕಾಲೇಜಿನ ಅಭಿವೃದ್ದಿ ಸಮಿತಿ ಸಭೆಯು ಅಧ್ಯಕ್ಷರಾದ ಶಾಸಕರಾದ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ನಡೆಯಿತು.

ಕಾಲೇಜಿಗೆ ಈ ಬಾರಿ ಪಿಯು ಪರೀಕ್ಷೆಯಲ್ಲಿ ಶೇ. ೧೦೦ ಪಲಿತಾಂಶ ಬಂದಿದ್ದು ಇದಕ್ಕಾಗಿ ಶಿಕ್ಷಕ ವೃಂದವನ್ನು , ಅಭಿವೃದ್ದಿ ಸಮಿತಿಯವರನ್ನು ಶಾಸಕರು ಅಭಿನಂದಿಸಿದರು. ಕಾಲೇಜಿನಲ್ಲಿ ಮೂಲಭೂತ ಸೌಕರ್ಯದ ಕೊರತೆ ಇರುವ ಬಗ್ಗೆ ಪ್ರಾಂಶುಪಾಲರು ಶಾಸಕರ ಗಮನಕ್ಕೆ ತಂದರು.

ಕಾಲೇಜಿನಲ್ಲಿ ತರಗತಿ ಕೊಠಡಿ ಕೊರತೆ,ಪ್ರಯೋಗಾಲಯ ನಕೊಠಡಿ ಕೊರತೆ, ಪೀಠೋಪಕರಣಗಳ ಕೊರತೆ, ಆಟದ ಮೈದಾನದ ಕೊರತೆ, ರಸ್ತೆ ಸಂಪರ್ಕ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪ್ರಾಂಶುಪಾಲರು ಶಾಸಕರ ಗಮನಕ್ಕೆ ತಂದರು. ಕಾಲೇಜಿಗೆ ಗೋಮಾಳ ಜಾಗವನ್ನು ಸೇರ್ಪಡೆ ಮಾಡುವ ಬಗ್ಗೆಯೂ ಚರ್ಚೆಗಳು ನಡೆದವು. ಸಭೆಯಲ್ಲಿ ಮಾತನಾಡಿದ ಶಾಸಕರು ಕಾಲೇಜಿನ ಅಭಿವೃದ್ದಿಗಾಗಿ ಸಮಿತಿಯನ್ನು ಸರಕಾರ ನೇಮಿಸುತ್ತದೆ.

ಈ ಸಮಿತಿಯವರು ಕಾಲೇಜಿನ ಕುಂದುಕೊರತೆಗಳ ಬಗ್ಗೆ ಅಧ್ಯಕ್ಷರ ಗಮನಕ್ಕೆ ತರಬೇಕಿತ್ತು, ಆದರೆ ಇಲ್ಲಿನ ಕೊರತೆಯ ವಿಚಾರವನ್ನು ನನ್ನ ಗಮನಕ್ಕೆ ತರುವಲ್ಲಿ ಸಮಿತಿ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿನ ಕೊರತೆಗಳನ್ನು ನೀಗಿಸಿ ಸಮಗ್ರ ಅಭಿವೃದ್ದಿಗೆ ವಿಶೇಷ ಅನುದಾನವನ್ನು ಒದಗಿಸುವುದಾಗಿ ಶಾಸಕರು ತಿಳಿಸಿದರುಗರಸಭಾ ಸದಸ್ಯ ಇಂದಿರಾ ,ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದಾಲಿ, ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ಪುಡಾ ಸದಸ್ಯರಾದ ನಿಹಾಲ್ ಶೆಟ್ಟಿ,ಸುರೇಂದ್ರ ರೈ ಮೊಟ್ಟೆತ್ತಡ್ಕ,ಸುರೇಶ್ ಪೂಜಾರಿ ,ರಫೀಕ್ ದರ್ಬೆ,







ಕಾರ್ಯಾಧ್ಯಕ್ಷೆ ಮಲ್ಲಿಕಾ ಜೆ ರೈ, ಅಭಿವೃದ್ದಿ ಸಮಿತಿಸದಸ್ಯರಾದ ಚಂದ್ರಕಾಂತ್, ಉಪನ್ಯಾಸಕರಾದ ಚಿತ್ರಲೇಖ,ಬೋಜರಾಜ,ವಿಷ್ಣು ಭಟ್, ವಿ ಕೆ ಜೈನ್,ಜೆರೋಮಸ್ ಪಾಯಸ್,ಹರಿಣಾಕ್ಷ, ಅಬ್ದುಲ್ ಅಝೀಝ್ ಮುಕ್ರಂಪಾಡಿ, ರಫೀಕ್ ಎಂ ಕೆ, ಉಪನ್ಯಾಸಕಿಯರಾದ ನಿರ್ಮಲಾ ಎನ್, ಪ್ರಸನ್ನ ಕುಮಾರಿ , ಉಪಸ್ಥಿತರಿದ್ದರು.ಪ್ರಾಂಶುಪಾಲರಾದ ಪ್ರಮೀಳಾ ಡಿ ಕಾಸ್ಟಾ ಸ್ವಾಗತಿಸಿದರು.,ನಕಚೇರಿ ಸಿಬಂದಿ ಉಷಾ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement