Published
6 months agoon
By
Akkare Newsಪುತ್ತೂರು: ಪುತ್ತೂರಿನಿಂದ ಪರ್ಲಡ್ಕ- ವಳತ್ತಡ್ಕ, ಮಾರ್ಗವಾಗಿ ಗುಮ್ಮಟಗದ್ದೆಗೆ ನಾಳೆಯಿಂದ ಸರಕಾರಿ ಬಸ್ ಸೇವೆ ಆರಂಭವಾಗಲಿದೆ.
ಚೆಲ್ಯಡ್ಕ ಸೇತುವೆ ಮುಳುಗಡೆ ಮತ್ತು ಅಪಾಯಕಾರಿಯಾಗಿದೆ ಎಂದು ಕೆಲ ದಿನಗಳ ಹಿಂದೆ ಈ ಮಾರ್ಗದಲ್ಲಿ ಘನ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದರು.
ಬಸ್ ಸಂಚಾರವಿಲ್ಲದೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದಾಗಿ ಸ್ಥಳೀಯರು ಶಾಸಕ ಅಶೋಕ್ ಕುಮಾರ್ ರೈ ಅವರಲ್ಲಿ ಮನವಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು. ಸ್ಥಳೀಯರ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡ ಶಾಸಕರು, ಜಿಲ್ಲಾಧಿಕಾರಿಯ ಅವರ ಗಮನಕ್ಕೆ ತಂದು ಪರ್ಲಡ್ಕ- ವಳತ್ತಡ್ಕ ಮಾರ್ಗವಾಗಿ ಗುಮ್ಮಟಗದ್ದೆಗೆ ಸರ್ಕಾರಿ ಬಸ್ ಸೇವೆ ಆರಂಭಿಸುವಂತೆ ಕೇಳಿಕೊಂಡಿದ್ದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜು.09ರಿಂದ ಬಸ್ ಸೇವೆ ಆರಂಭವಾಗಲಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಮಧ್ಯಾಹ್ನ 2 ಮತ್ತು ಸಂಜೆ 5.30 ಕ್ಕೆ ಗುಮ್ಮಟೆಗದ್ದೆಯಿಂದ ಬಸ್ಸು ಹೊರಡಲಿದೆ.