Published
5 months agoon
By
Akkare Newsಪುತ್ತೂರು:ನಿಜಕ್ಕಾದರೆ ಅದು ಬಗೈರ್ ಹುಕುಂ, ಅಂದರೆ ಕಾನೂನಾತ್ಮಕವಾಗಿಲ್ಲದ ಅಂತ ಅರ್ಥ. ಆದರೆ ವಾಡಿಕೆಯಲ್ಲಿ ಅದು ಬಗರ್ ಹುಕುಂ ಅಂತಾನೆ ಆಗಿದೆ. ಕರ್ನಾಟಕದಲ್ಲಿ ಭೂಮಿ ಇಲ್ಲದ ರೈತರು ಯಾವುದೇ ದಾಖಲೆಗಳಿಲ್ಲದೆ ತಮ್ಮದಲ್ಲದ ಜಾಗದಲ್ಲಿ ಬೇಸಾಯ, ಕೃಷಿ ಮಾಡುತ್ತಿದ್ದುದನ್ನು ಸಕ್ರಮಗೊಳಿಸಿ ಅವರು ಬೇಸಾಯ ಮಾಡುತ್ತಿದ್ದ ಅಕ್ರಮ ಜಮೀನನ್ನು ಅವರ ಹೆಸರಿಗೇ ಸಕ್ರಮಗೊಳಿಸಿ ದಾಖಲೆ ಮಾಡಿಕೊಡಲು ಸರಕಾರ ಮುಂದಾಗಿತ್ತು.
1991 ರಲ್ಲಿ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಿ ನಮೂನೆ – 50ರಲ್ಲಿ ಅರ್ಜಿ ಸ್ವೀಕರಿಸಲಾಗಿತ್ತು. ಬಳಿಕ 1998 ರಲ್ಲಿ ಮತ್ತೆ ನಮೂನೆ- 53 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಕೊನೆಗೆ 2018ರ ಸಾಲಿನಲ್ಲೂ ನಮೂನೆ – 57 ರಲ್ಲಿ ಅರ್ಜಿ ಸ್ವೀಕಾರ ನಡೆದಿತ್ತು. ಈ ರೀತಿ ಬಗರ್ ಹುಕುಂ ಜಮೀನುಗಳನ್ನು ಅನರ್ಹರಿಗೆ ಪರಾಭಾರೆಯಾಗುವುದನ್ನು ತಪ್ಪಿಸಲು ಈ ಬಾರಿ ಸರಕಾರ “ಬಗರ್ ಹುಕುಂ ಆ್ಯಪ್ ” ಅನ್ನು ಜಾರಿಗೆ ತಂದಿತು.
ಆಧುನಿಕ ತಂತ್ರಜ್ಞಾನದ ಮೂಲಕ ಬಗರ್ ಹುಕುಂ ಜಮೀನುಗಳ ಅಳತೆ, ಅವುಗಳಿರುವ ಸ್ಥಳದ ಮಾಹಿತಿ, ಅವುಗಳಲ್ಲಿ ನಿಜಕ್ಕೂ ಕೃಷಿ ಮಾಡಲಾಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಉಪಗ್ರಹಾಧಾರಿತ ಚಿತ್ರಗಳ ಮೂಲಕ ಪಡೆದು ಆ್ಯಪ್ ಮೂಲಕವೇ ಅರ್ಜಿದಾರನ ಕೆವೈಸಿ ಮಾಹಿತಿಯನ್ನೂ ಪಡೆದು ಓಟಿಪಿ ಮೂಲಕ ಮಂಜೂರಾತಿ ನೀಡುವ ಒಂದು ಯೋಜನೆ ಆರಂಭವಾಗಿದೆ.
ಆಪ್ ಮುಕಾಂತರ ಅರ್ಜಿ ವಿಲೇವಾರಿಗೆ ತುಂಬಾ ಸಮಯ ಹಿಡಿಯುವುದಿಲ್ಲ. ಹಿಂದೆ ದಕ್ಷಿಣ ಕನ್ನಡದಲ್ಲಿ 1,58,816.89 ಎಕರೆ ಕೃಷಿ ಜಮೀನು ಸಕ್ರಮೀಕರಣಕ್ಕೆ 88,549 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಪುತ್ತೂರು ಉಪವಿಭಾಗದಲ್ಲೇ ಗರಿಷ್ಟ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಅತ್ಯಂತ ಕಡಿಮೆ ಅರ್ಜಿಗಳು ವಿಲೇವಾರಿಯಾಗಿದ್ದವು.
ಇದಕ್ಕೆ ಕೊರೋನಾ ಲಾಕ್ ಡೌನ್, ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ನಿರುತ್ಸಾಹ ಎಲ್ಲವೂ ಕಾರಣವಾಗಿದ್ದವು. ಈಗ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ, ಕಂದಾಯ ಸಚಿವ ಶ್ರೀ ಕೃಷ್ಣ ಭೈರೇಗೌಡರ ದೂರದರ್ಶಿತ್ವದ ನಿರ್ದೇಶನದಡಿಯಲ್ಲಿ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ, ಉಪಗ್ರಹಾಧಾರಿತ ಬಗರ್ ಹುಕುಂ ಆ್ಯಪ್ ಮೂಲಕ ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
ಪುತ್ತೂರಿನಲ್ಲಿ ಈಗಾಗಲೇ ಬಗರ್ ಹುಕುಂ ಸಕ್ರಮೀಕರಣ ಸಮಿತಿ ಎರಡು ಬಾರಿ ಸಭೆ ನಡೆಸಿದ್ದು, ಅರ್ಜಿ ವಿಲೇವಾರಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಲು ಅತ್ಯಂತ ಸಂತೋಷ ಪಡುತ್ತೇನೆ. ಚುನಾವಣೆಗೆ ನಿಲ್ಲುವ ಮೊದಲೇ ಜನರಿಗೆ ಆಶ್ವಾಸನೆ ನೀಡಿದ ಪ್ರಕಾರ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡುತ್ತಿರುವುದು ನೆಮ್ಮದಿ ತಂದಿದೆ.
ಅಕ್ರಮಸಕ್ರಮಸಮಿತಿಯಾಗಿ 6 ತಿಂಗಳು ಕಳೆದಿದೆ. ಈ ಆರು ತಿಂಗಳಲ್ಲಿ 3 ತಿಂಗಳು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಉಳಿದ ಮೂರು ತಿಂಗಳ ನಡುವೆ ನಾವು ಅಕ್ರಮ ಸಕ್ರಮ ವಿಲೇವಾರಿ ಮಾಡಿದ್ದೇವೆ. ಸರಕಾರದಿಂದ ಹೊಸ ಆ್ಯಾಪ್ ಬಂದಿದ್ದು ನಮ್ಮ ಟೆಕ್ನಿಕಲ್ ಟೀಂ ಮತ್ತು ಅಧಿಕಾರಿಗಳ ಟೀಂ ಜೊತೆಯಾಗಿ ಕೆಲಸ ಮಾಡಿದ್ದರಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡಲು ಸಾಧ್ಯವಾಗಿದೆ.
ನನ್ನ ಕನಸೂ ಆದೇ ಆಗಿತ್ತು. ಭೃಷ್ಡಾಚಾರ ರಹಿತವಾಗಿ ಅಕ್ರಮ ಸಕ್ರಮ ಅರ್ಜಿ ವಿಲೇವಾರಿಯಾಗಿದೆ ಎಂಬ ಗೌರವವೂ ನಮಗೆ ದೊರಕಿದೆ
ಅಶೋಕ್ ರೈ ಶಾಸಕರು ಪುತ್ತೂರು