ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಕೌಡಿಚ್ಚಾರ್ ರಾಷ್ಟ್ರೀಯ ಹೆದ್ದಾರಿಗೆ ಧರೆ ಕುಸಿತ: ಶಾಸಕರ ಭೇಟಿ:ಅಪಾಯಕಾರಿ ಧರೆಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ

Published

on

ಪುತ್ತೂರು: ಮಾಣಿ- ಸಂಪಾಜೆ ರಾ. ಹೆದ್ದಾರಿ ೨೭೫ ರ ಕೌಡಿಚ್ಚಾರ್ ಸಮೀಪದ ಮಡ್ಯಂಗಳದಲ್ಲಿ ಧರೆ ಕುಸಿದು ಸಂಚಾರಕ್ಕೆ ಅಡಚಣೆಯಾದ ಘಟನೆ ಜು. ೩೦ ರಂದು ನಡೆದಿದ್ದು ಘಟನಾ ಸ್ಥಳಕ್ಕೆ ಶಾಸಕರಾದ ಅಶೋಕ್ ರೈಯವರು ಜು. ೩೧ ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಮಢ್ಯಂಗಳ ಬಳಿ ಸುಮಾರು ನಾಲ್ಕು ಕಡೆಗಳಲ್ಲಿ ಧರೆ ಕುಸಿತವಾಗಿದೆ. ಧರೆ ಕುಸಿದು ಮಣ್ಣು ರಸ್ತೆಗೆ ಬಿದ್ದ ಕಾರಣ ಸಂಚಾರಕ್ಕೆ ಅಡಚಣೆಯಾಗಿತ್ತು. ಪೊಲೀಸದರು ಬದಲಿ ಮಾರ್ಗದ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ರಸ್ತೆಗೆ ಬಿದ್ದ ಮಣ್ಣನ್ನು ತೆರವು ಮಾಡಲಾಗಿತ್ತು. ಆದರೆ ಬುಧವಾರದಂದು ಪುನ: ಮಣ್ಣು ಕುಸಿತವಾಗಿದೆ. ಮಣ್ಣು ತೆರವು ಕಾರ್ಯ ಸಮನರೋಪಾದಿಯಲ್ಲಿ ನಡೆಯುತ್ತಿದ್ದು ಇಂದು ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ.

ಅಪಾಯಕಾರಿ ಧರೆ ತರವುಗೊಳಿಸಿ: ಶಾಸಕರ ಸೂಚನೆ

ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜತೆ ಮಾತನಾಡಿದ ಶಾಸಕರಾದ ಅಶೋಕ್ ರೈಯವರು ಇಲ್ಲಿ ಒಟ್ಟು ೫ ಕಡೆಗಳಲ್ಲಿ ಧರೆ ಕುಸಿತವಾಗಿದೆ. ಅಪಾಯಕಾರಿ ಧರೆಗಳನ್ನು ತೆರವು ಮಾಡಿ. ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು. ರಸ್ತೆ ಬಿದ್ದ ಮಣ್ಣನ್ನು ಪುನ; ರಸ್ತೆ ಬದಿಯಲ್ಲೇ ಹಾಕಿದರೆ ಮಳೆಗೆ ರಸ್ತೆ ಕೆಸರುಮಯವಾಗಲಿದ್ದು ಮಣ್ಣನ್ನು ಹೊರಗಡೆ ಸಾಗಿಸುವಂತೆ ಸೂಚನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೊಳ್ಳಾಡಿ, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಮಣ್ಣು ತೆರವು ಮಾಡುತ್ತಿರುವ ಮೊಗೆರೋಡಿ ಸಂಸ್ಥೆಯ ಇಂಜನಿಯರ್ ದಾಮೋದರ್ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement