Published
5 months agoon
By
Akkare Newsಪುತ್ತೂರು: ಗುಡ್ಡ ಕುಸಿತದ ಪುತ್ತೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ- ಬಪ್ಪಳಿಗೆಯಲ್ಲಿ ಸದ್ಯ ರಸ್ತೆ ಕ್ಲೀಯರ್ ಆಗಿದೆ. ಬೆಳಗ್ಗಿನಿಂದ ಮಧ್ಯಾಹ್ನದ ತನಕ 4 ಜೆಸಿಬಿಗಳು, 1 ಹಿಟಾಚಿಯಿಂದ ಸತತ 9 ಗಂಟೆ ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದು, ಬಳಿಕ ನೀರು ಹಾಯಿಸಿ ಕೆಸರು ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದೆ.
ಮಣ್ಣು ಕುಸಿಯುವ ಭೀತಿಯಿಂದ ರಸ್ತೆಯ ಒಂದು ಬದಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ಮಾಡಲು ಅವಕಾಶ ನೀಡಲಾಗಿದೆ.