Published
3 months agoon
By
Akkare Newsಪುತ್ತೂರು: ಪಂಚ ಗ್ಯಾರಂಟಿಗಳ ಪೈಕಿ ಬಹುಪಾಲು ಗ್ಯಾರಂಟಿ ಮಹಿಳೆಯರಿಗೆ ನೀಡಿದ ಸರಕಾರ ಸ್ವ ಉದ್ಯೋಗದಲ್ಲೂ ಮಹಿಳೆಯರಿಗೆ ನೆರವು ನೀಡುವ ಉದ್ದೇಶದಿಂದ ವಿವಿಧ ಇಲಾಖೆಗಳ ಮೂಲಕ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡುತ್ತಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಶಾಸಕರ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
ಸರಕಾರದಿಂದ ಕೆಲವೊಂದು ಸೌಲಭ್ಯಗಳನ್ನು ವೆಬ್ ಸೈಟ್ ಮೂಲಕ ಅಥವಾ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳುವಂತೆ ಸಾರ್ವಜನಿಕತಿಳಿಸುತ್ತದೆ ಆದರೆ ಈ ಆನ್ ಲೈನ್ ಅರ್ಜಿ ಹಾಕುವ ಬಗ್ಗೆ ಕೆಲವರಿಗೆ ಮಾಹಿತಿ ಕೊರತೆ ಇರುತ್ತದೆ , ಈ ಕಾರಣಕ್ಕೆ ಕೆಲವರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಪ್ರತೀಯೊಂದು ಇಲಾಖೆಗಳು ಜನ ಸಾಮಾನ್ಯರಿಗೂ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು ಮತ್ತು ಅರ್ಜಿ ಹಾಕುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳಿಗೂ ಮಾಹಿತಿ ನೀಡುವ ಕೆಲಸವನ್ನು ಮಾಡಬೆಕು ಎಂದು ಹೇಳಿದರು.
೩೬ ಮಂದಿಗೆ ಹೊಲಿಗೆ ಯಂತ್ರ ವಿತರಣೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯಾದ ೩೬ ಮಂದಿ ಪಲಾನುಭವಿಗಳಿಗೆ ಶಾಸಕರು ವಿತರಣೆ ಮಾಡಿದರು. ಈ ಬಾರಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಗಿದೆ. ಟೈಲರಿಂಗ್ ವೃತ್ತಿ ಮೂಲಕ ಸ್ವ ಉದ್ಯೋಗ ಮಾಡುವ ಫಲನುಭವಿ ಮಹಿಳೆಯರು ಯಂತ್ರವನ್ನು ಪಡೆದುಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ಅಕ್ರಮಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಉಪಸ್ಥಿತರಿದ್ದರು. ಹಿಮದುಳಿದ ವರ್ಗಗಳ ಇಲಾಖೆ ದಿ. ದೇವರಾಜು ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಂಜು ಸ್ವಾಗತಿಸಿ ವಂದಿಸಿದರು.