Published
1 month agoon
By
Akkare Newsಪುತ್ತೂರು: ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ತಂದು ಬಿಡುವಷ್ಟರ ಮಟ್ಟಿಗೆ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತ ವಾತಾವರಣ ಸೃಷ್ಟಿಯಾದರೆ ಮಾತ್ರ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ,ಇದಕ್ಕಾಗಿ ಸರಕಾರ ಮತ್ತು ಪೋಷಕರುಜಂಟಿಯಾಗಿ ಕೆಲಸಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರುಮುಕ್ವೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ಸಿಎಸ್ಆರ್ ಫಂಡ್‌ನಿಂದ 30 ಲಕ್ಷ ರೂ ವೆಚ್ಚದಲ್ಲಿನಿರ್ಮಾಣವಾಗಲಿರುವ ನೂತನ ಶಾಲಾ ಕೊಠಡಿಗೆ ಶಿಲಾನ್ಯಾಸ ನೆರವೇರಿಸಿಮಾತನಾಡಿದರು.
ಎಂಆರ್ ಪಿಎಲ್ ಸಂಶ್ಥೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 4 ಕೋಟಿಗೂಮಿಕ್ಕಿ ಅನುದಾನಬಂದಿದೆ. ತಮ್ಮ ಮೂಲಕ ಶಿಫಾರಸ್ಸುಮಾಡಲಾದ ಶಾಲೆಗಳಿಗೆ ಮಾತ್ರ ಈ ಅನುದಾನವನ್ನು ನೀಡಲಾಗುತ್ತದೆ. ಸರಕಾರದ ಜೊತೆ ಖಾಸಗಿ ಸಹಭಾಗಿತ್ವ ಇದ್ದಲ್ಲಿಮಾತ್ರ ಇನ್ನಷ್ಟುಅಭಿವೃದ್ದಿ ಕೆಲಸಗಳು ಸಾಧ್ಯವಾಗಲಿದೆ ಎಂದು ಹೇಳಿದರು.
ಮಕ್ಕಳಿಗೆ ಇಂಗ್ಲೀಷ್‌ಕಲಿಸಿ
ತಮ್ಮಮಕ್ಕಳಿಗೆ ಕನ್ನಡ,ತುಳುಭಾಷೆಯ ಜೊತೆ ಇಂಗ್ಲೀಷನ್ನೂಕಲಿಸಬೇಕು. ಉದ್ಯೋಗ ಪಡೆದುಕೊಳ್ಳುವಲ್ಲಿಇಂಗ್ಲೀಷ್ ಅಗತ್ಯವಾಗಿದೆ ಎಂದ ಶಾಸಕರುಮುಕ್ವೆ ಶಾಲೆಯ ಬಡವರ ಮಕ್ಕಳೂ ಇಂಗ್ಲೀಷ್‌ಮಾತನಾಡುವ ಕಾಲ ದೂರವಿಲ್ಲ. ಕೆಪಿಎಸ್ ಮಾದರಿಶಾಲೆಯಲ್ಲಿ ಎಲ್ ಕೆ ಜಿಯಿಂದ ಪಿಯು ತನಕ ಆಂಗ್ಲ ಮಾಧ್ಯಮ ನಡೆಯುತ್ತದೆ. ಮುಂದೆ ಈ ಯೋಜನೆ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ ಎಂದುಶಾಸಕರು ಹೇಳಿದರು.
ಇಂಗ್ಲೀಷ್ ಟೀಚರ್ ಗೆ ಇಂಗ್ಲೀಷ್ ಗೊತ್ತಿರಲಿ:
ನಿಮ್ಮ ಶಾಲೆಗೆ ನೇಮಕಮಾಡುವ ಇಂಗ್ಲೀಷ್ ಟೀಚರ್ ಗೆ ಇಂಗ್ಲೀಷ್ ಗೊತ್ತಿದೆಯೋ ಎಂಬುದನ್ನು ಖಾತ್ರಿಮಾಡಿಕೊಳ್ಳಿ ಯಾಕೆಂದರೆ ಟೀಚರ್ ಗೆ ಇಂಗ್ಲೀಷ್ ಗೊತ್ತಿರದೇ ಇದ್ದರೆ ಮಕ್ಕಳೂ ಕಲಿಯಲು ಸಾಧ್ಯವಿಲ್ಲ.ಇಂಗ್ಲೀಷಲ್ಲಿ ಎಂ ಎ ಮಾಡಿರುವ ಟೀಚರನ್ನು ಉತ್ತಮ ಸಂಬಳ ನೀಡಿ ನಿಯೋಜಿಸಬೇಕು ಇದಕ್ಕೆ ಸರಕಾರ ಒಂದಷ್ಟುಸಂಬಳನೀಡುತ್ತದೆ ಜೊತೆಗೆ ಪೋಷಕರೂ ಕೈ ಜೋಡಿಸಿದರೆ ನಮ್ಮಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.
ಶಿಕ್ಷಣದಲ್ಲೂ ಶಾಸಕರ ಕ್ರಾಂತ ಆರಂಭವಾಗಿದೆ; ಕೆ ಪಿ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವಮಾತನಾಡಿ ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿಮಾಡುತ್ತಿರುವ ಶಾಸಕರು ಶಿಕ್ಷಣಕ್ಷೇತ್ರದಲ್ಲೂ ಹೊಸಕ್ರಾಂತಿಗೆ ಕೈ ಹಾಕಿದ್ದಾರೆ.ಎಂ ಆರ್ ಪಿ ಎಲ್ ಸಂಶ್ಥೆಯಮೂಲಕ ಶಿಕ್ಷಣಕೇಂದ್ರಗಳಿಗೆ 3 ಕೋಟಿಗೂ ಮಿಕ್ಕಿಅನುದಾನವನ್ನು ತಂದು ಇತಿಹಾಸನಿರ್ಮಾಣಮಾಡಿದ್ದಾರೆ ,ಮುಂದಿನದಿನಗಳಲ್ಲಿಸರಕಾರಿಶಾಲೆಗಳು ಖಾಸಗಿ ಶಾಲೆಯನ್ನು ಮೀರಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಗೆ 3 ಲಕ್ಷ ಅನುದಾನವನ್ನು ಶಾಸಕರು ಘೋಷಿಸಿದರು.
ಕಾರ್ಯಕ್ರದಮ ವೇದಿಕೆಯಲ್ಲಿ ನರಿಮೊಗರು ಗ್ರಾಪಂ ಸದಸ್ಯರಾದ ಕಲಂದರ್ ಶಾಪಿ, ಕ್ಷೇತ್ರ ಸಂಪನ್ಮೂಲಸಮನ್ವಯಾಧಿಕಾರಿ ನವೀನ್ ವೇಗಸ್,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೋಮನಾಥ ಗೌಡ ಉಪಸ್ಥಿತರಿದ್ದರು.
ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಮುಬೀನ್ ಸಾಹೇಬ್‌ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕಿ ಕಾರ್ಮೆಲಸ್ ಅಂದ್ರಜೆ ಸ್ವಾಗತಿಸಿದರು.ಎಸ್ ಡಿ ಎಂಸಿ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ವಂದಿಸಿದರು. ಖಾಲಿದ್ ಹಾಗೂ ಚರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು