Published
1 month agoon
By
Akkare Newsವಿಟ್ಲ: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ), ಮಲರಾಯ ಜೇರದಲ್ಲಿ ಡಿಸೆಂಬರ್ 21 ರಿಂದ 25 ರ ವರೆಗೆ ನಡೆಯುವ ದೈವಗಳ ಸಾನಿಧ್ಯಭಿವೃದ್ಧಿ ಬ್ರಹ್ಮಕಲಶಾಭಿಷೇಕದ ಚಪ್ಪರ ಮಹೂರ್ತ ಮತ್ತು ಸಭಾ ಕಾರ್ಯಕ್ರಮ ಸಾನಿಧ್ಯಭಿವೃದ್ಧಿ ಬ್ರಹ್ಮಕಲಶಾಭಿಷೇಕದ ದೀಪ ಪ್ರಜ್ವಲನೆಯನ್ನು ಡಾ. ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರು ನೆರವೀರಿಸಿದರು.
ಕೃಷ್ಣಪ್ಪ ಪೂಜಾರಿ ಧರ್ಮದರ್ಶಿಗಳು, ಚಾಮುಂಡೇಶ್ವರಿ ದೇವಸ್ಥಾನ ರಾಜತಾದ್ರಿ , ಸೇಸಪ್ಪ ಗೌಡ ಹಡೀಲು, ಅಧ್ಯಕ್ಷರು ಮಲರಾಯ ದೈವಸ್ಥಾನ ನಡುಮನೆ ಪಿಲಿಂಜ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿದರು.
ನಾರಾಯಣ ಶೆಟ್ಟಿ ಕುಂಡಡ್ಕ, ಬಾಲಕೃಷ್ಣ ಅಮೈ, ರಮೇಶ್ ಭಟ್ ಎಂ,ಹೆಚ್ ಭಂಡಾರದ ಮನೆ ಮಿತ್ತೂರು, ಜಯರಾಮ ಪೂಜಾರಿ ಕಾರ್ಯಾಡಿಗುತ್ತು ತೋರಣ ಮುಹೂರ್ತಕ್ಕೆ ಚಾಲನೆ ನೀಡಿದರು.
ಬಳಿಕ ವೇದಿಕೆಯಲ್ಲಿ ಮಾತನಾಡಿದ ಡಾ. ಪ್ರಭಾಕರ ಭಟ್ ನಾವು ಭೂಮಿಯನ್ನು ಪ್ರೀತಿ ಮಾಡುವವರಲ್ಲ, ಆರಾಧನೆ ಮಾಡುವವರು, ನಾವು ಇಟ್ಟ ಕಲ್ಲುಗಳಲ್ಲಿ ದೈವ ದೇವರನ್ನು ನೋಡುತ್ತೇವೆ, 350 ವರ್ಷ ಇತಿಹಾಸವಿವರುವ ಈ ಮಣ್ಣಿನ ಜಾಗ ಪವಿತ್ರತೆ ಇದೆ, ಎಲ್ಲರಲ್ಲಿ ದೈವತ್ವ ವನ್ನು ಕಾಣುವುವದು ಹಿಂದುತ್ವ ಮಾತ್ರ, ಎಲ್ಲರಿಗೂ ಒಳಿತು ಮಾಡುವ ಸಾಮಾಜ ಹಿಂದೂ ಸಮಾಜ, ದೈವ ದೇವರ ಹೆಸರಿನಲ್ಲಿ ನಾವೆಲ್ಲರೂ ಒಂದಾಗಬೇಕು, ನಾವು ಧರ್ಮವನ್ನು ರಕ್ಷಣೆ ಮಾಡಬೇಕು, ಆಗ ಧರ್ಮ ನಮನ್ನು ರಕ್ಷಣೆ ಮಾಡುತ್ತದೇ, ಭವಿಷ್ಯದ ಮಕ್ಕಳಿಗೆ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಿಸುವಂತೆ ಮಾಡಿ ಎಂದರು.
ಮುಖ್ಯ ಅತಿಥಿಯಾಗ ಆಗಮಿಸಿ ಮಾತಾಡಿದ ಶ್ರೀಮತಿ ಆಶಾ ಪಾರ್ವತಿ ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಬಿ. ಸಿ ಟ್ರಸ್ಟ್ (ರಿ ) ಮೇಲ್ವಿಚಾರಕರು ಮಾಣಿ ವಲಯ ಧರ್ಮಸ್ಥಳ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಿಮ್ಮ ಮಲರಾಯ ಸಾನಿಧ್ಯಕ್ಕೆ ದೇಣಿಗೆ ಹಾಗೂ ಸಂಘದ ಸದಸ್ಯರನ್ನು ಶ್ರಮದಾನಕ್ಕಾಗಿ ಕಳುಹಿಸಿ ಕೊಟ್ಟಿದ್ದೇವೆ, ಮುಂದೆಯೂ ಕೂಡ ನಮ್ಮಿಂದ ಆಗುವಂತಹ ಸೇವೆಯನ್ನು ಕ್ಷೇತ್ರಕ್ಕೆ ಮಾಡಲಿದ್ದೇವೆ ಎಂದರು.
ರಮೇಶ್ ಭಟ್ ಎಮ್. ಎಚ್ ಭಂಡಾರದ ಮನೆ ಮಿತ್ತೂರು ಮಾತನಾಡಿ, ಮಲರಾಯ ಸಪರಿವಾರ ದೈವಗಳ ಸಾನಿಧ್ಯಭಿವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ನಡೆಯುವ ತಯಾರಿ ಬಗ್ಗೆ ಮಾತಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸತೀಶ್ ಶೆಟ್ಟಿ ಮೂಡೈಮಾರು ಅಧ್ಯಕ್ಷರು ಜೆರ್ಣೋದ್ದಾರ ಸಮಿತಿ ಮಾತನಾಡಿ ಇಲ್ಲಿನ ಇತಿಹಾಸ, ಪ್ರಶ್ನೆ ಚಿಂತನೆ ಬಗ್ಗೆ ಹಾಗೂ ಮುಂದೆ ನಡೆಯುವಂತ ಕಾರ್ಯಕ್ರಮಗಳು, ಭಕ್ತಾಧಿಗಳ ಮನೆಗಳ ಭೇಟಿ, ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋವಿಂದರಾಜ್ ಪೆರ್ವಾಜೆ ವಕೀಲರು, ಗಿರಿ ಶಂಕರ್ ಕೈಲಾರ ಸದಸ್ಯರು ವನದುರ್ಗ ಸೇವಾ ಟ್ರಸ್ಟ್ ದೇಂತಡ್ಕ,ಬಾಬು ಆಚಾರ್ಯ ಅಳಕೆಮಜಲು, ಸಂಜೀವ ದರ್ಬೆ ಅಧ್ಯಕ್ಷರು ಸೀತಾರಾಮಾಂಜನೇಯ ಭಜನಾ ಮಂದಿರ ರಾಮನಗರ, ಮಹಾಬಲ ಆಚಾರ್ಯ ಸಂಘಟನಾ ಕಾರ್ಯದರ್ಶಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುಟಾಣಿ ಪದ್ಮ ಪ್ರಿಯ ಕಾರ್ಯಾಡಿ ಅಮೃತ ವಚನ ಹೇಳಿ, ಚರಣ್ ಅಮೈ ಪ್ರಾರ್ಥನೆ ಹಾಡಿದರು. ವಸಂತ್ ಕುಮಾರ್ ಅಮೈ ಅಧ್ಯಕರು ಬ್ರಹ್ಮಕಲಶ ಸ್ವಾಗತ ಸಮಿತಿ ಪ್ರಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಜಯಕರ ಅಮೈ ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ಸುರೇಂದ್ರ ಕಾರ್ಯಾಡಿ ಧನ್ಯವಾದ ಸಮರ್ಪಿಸಿದರು.
ಊರ ಪರವೂರ ಭಕ್ತಾದಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.