Published
4 weeks agoon
By
Akkare Newsಪುತ್ತೂರು: ಮುಂಡೂರು ಗ್ರಾಮದ ನರಿಮೊಗರುನಲ್ಲಿ ಇರುವ ಪರಿಶಿಷ್ಟ ಜಾತಿಗೆ ಸೇರಿದ ಕಾಲೋನಿಯ ಒಂದು ಮನೆಗೆ ಭೂಗತ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಸುಮಾರು 4 ತಿಂಗಳು ವಿದ್ಯುತ್ ಸಂಪರ್ಕ ಕಡಿತಹಿನ್ನೆಲೆಯಲ್ಲಿ ಶಾಲೆ ಗೆ ಹೋಗುವ ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದನ್ನು ಯಾಕೂಬ್ ಮುಂಡೂರು ಹಾಗೂ ಅವರ ತಂಡ ಆ ಮನೆಯನ್ನು ಬೇಟಿ ನೀಡಿದ ಸಂದರ್ಭ ವಿದ್ಯುತ್ ಸಂಪರ್ಕ ಕಡಿತ ಗೊಂಡ ವಿಚಾರ ತಿಳಿದು ಸಾಮಾಜಿಕ ಕಾರ್ಯಕರ್ತ ಮೆಸ್ಕಾಂ ಸಲಹಾಸಮಿತಿ ಸದಸ್ಯ ಪ್ರವೀಣ್ ಆಚಾರ್ಯ ಅವರ ಗಮನಕ್ಕೆ ತಿಳಿಸಿದರು ತಕ್ಷಣವೇ ಕಾರ್ಯ ಪ್ರವೃತರದ ಪ್ರವೀಣ್ ಆಚಾರ್ಯ ನರಿಮೊಗರು ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಗಮನಕ್ಕೆ ಆ ಮನೆಯ ವಿದ್ಯಾರ್ಥಿಗಳ ಪರಿಸ್ಥಿತಿಯ ಬಗ್ಗೆ ತಿಳಿಸಿದಾಗ ಶಾಸಕರು ಮೆಸ್ಕಾಂ ಇಂಜಿನಿಯರ್ ರಮೇಶ್ ಅವರಿಗೆ ತಿಳಿಸಿ ತಕ್ಷಣವೇ ವಿದ್ಯುತ್ ಸಂಪರ್ಕ ನೀಡಲು ಸೂಚನೆ ನೀಡಿದರು.
ಈ ಬಗ್ಗೆ ಮೆಸ್ಕಾಂ ಗುತ್ತಿಗೆದಾರ ಮಹಾಸತಿ ನವೀನ್ ಸಾಲ್ಮರ ಇವರ ತಂಡ ತಕ್ಷಣವೇ ಕೆಲಸವನ್ನು ನಿರ್ವಹಿಸಿ ವಿದ್ಯುತ್ ಸಂಪರ್ಕ ನೀಡಿದರು ವಿದ್ಯುತ್ ಸಂಪರ್ಕ ಸಿಗಲು ಕಾರಣ ಕರ್ತರಾದ ಮೆಸ್ಕಾಂ ಸಲಹಾಸಮಿತಿ ಸದಸ್ಯ ಪ್ರವೀಣ್ ಆಚಾರ್ಯ ನರಿಮೊಗರು ಇವರ ಸಾಮಾಜಿಕ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.