Published
3 weeks agoon
By
Akkare Newsದಿನಾಂಕ ನವೆಂಬರ್ 28 ರಂದು ಗ್ರಾಮಜನ್ಯದ ನೂತನ ಲೋಗೋ ಅನಾವರಣ ಕಾರ್ಯಕ್ರಮ ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ಮುಳಿಯ ಸಂಸ್ಥೆಯ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿ ನೂತನ ಲೋಗೋ ಅನಾವಣ ಮಾಡಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ವಸಂತ ಕೆದಿಲಾಯ ಪ್ರಾರ್ಥನೆ ನೆರವೇರಿಸಿದರು.
ಈ ಕಾರ್ಯಕ್ರಮದ ಮೊದಲು ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದ ನಿರ್ದೇಶಕರಾದ ಶ್ರೀ ನಿರಂಜನ್ ಪೋಳ್ಯ, ಸಂಸ್ಥೆಯ ಮೂಲ ವಿಚಾರಗಳ ಬಗ್ಗೆ ವಿವರಿಸುತ್ತಾ ಜೇನು ಕೃಷಿಯಲ್ಲಿ ಗ್ರಾಮಜನ್ಯವು ವಿನೂತ ಒಪ್ಪಂದ ಆಧಾರಿತ ಸಮುದಾಯ ಕೃಷಿಯಲ್ಲಿ ತೊಡಗಿದ್ದು ಇದು ರಾಷ್ಟ್ರಮಟ್ಟದ ಗಮನ ಸೆಳೆದಿದೆ ಈ ಕಾರಣದಿಂದಾಗಿ ರಾಷ್ಟ್ರೀಯ ಜೇನು ಮಂಡಳಿಯ ವತಿಯಿಂದ ಭಾರತ ಸರಕಾರದ ಸಣ್ಣ ಕೃಷಿಕರ ವ್ಯಾಪಾರ ಒಕ್ಕೂಟ (SFAC) ವತಿಯಿಂದ ಅತ್ಯಾಧುನಿಕ ಜೇನು ಸಂಸ್ಕರಣಾ ಘಟಕ ಸ್ಥಾಪನೆಗೆ ರೂ. 2.22 ಕೋಟಿ ರೂಗಳ ಅನುದಾನ ನೀಡಿದ್ದು
ಸುಮಾರು 4.5 ಕೋಟಿ ವೆಚ್ಚದ ಕಾರ್ಯಯೋಜನೆ ಕೆಲಸಗಳು ಪ್ರಗತಿಯಲ್ಲಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಪುತ್ತೂರಿನ ಮುಂಡೂರು ಪಂಚಾಯತ್ ವ್ಯಾಪ್ತಿಯ ಪಂಜಾಳ ದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು. ಇದರೊಂದಿಗೆ ಜೇನಿನ ಮೌಲ್ಯ ವರ್ಧಿತ ಉತ್ಪನ್ನ ಗಳನ್ನು ಮುಂದಿನ ದಿನಗಳಲ್ಲಿ ತರಲಿದ್ದೇವೆ ಎಂದರು.
ಅಧ್ಯಕ್ಷರಾದ ಮೂಲ ಚಂದ್ರ ಕುಕ್ಕಾಡಿ ರವರು ಮಾತನಾಡುತ್ತಾ ಇದರ ಜೊತೆಯಲ್ಲಿ ಹಲಸು ಮೌಲ್ಯವರ್ಧನೆ ಹಾಗೂ ಬಿದಿರು ಕೃಷಿ ಸೇರಿದಂತೆ ಹಲವು ಕಾರ್ಯ ಯೋಜನೆಗಳು ನಡೆಯುತ್ತಿದೆ , ಸುಮಾರು ಹತ್ತು ಸಾವಿರದಷ್ಟು ಬಿದಿರು ಗಿಡ ವಿತರಿಸಲಾಗಿದೆ ಬಿದಿರಿನಿಂದ ಮುಂದಿನ ದಿನಗಳಲ್ಲಿ ಬಹಳಷ್ಟು ಪ್ರಯೋಜನ ಕಾಣಲಿದ್ದೇವೆ ಎಂದರು.
ಕಾಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ರಾಮಪ್ರತೀಕ್ ಕರಿಯಾಲ ಶ್ರೀಹರ್ಷ ಎಕ್ಕಡ್ಕ ಶ್ರೀನಂದನ ಕುಂಞಿಹಿತ್ಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ,ಸಂಸ್ಥೆಯ ಸಿಬ್ಬಂದಿಗಳಾದ ಶಶಿಧರ ರಾವ್ ಹಾಗೂ ಪವನ್ ಎ.ಎಸ್ ಉಪಸ್ಥಿತರಿದ್ದರು.