Published
2 months agoon
By
Akkare Newsಸ್ವಚ್ಚತೆ ಕಾಪಾಡದವರಿಗೆ ನಿರ್ದಾಕ್ಷಿಣ್ಯ ಕ್ರಮ : ಶ್ರೀಕಾಂತ್ ಬಿರಾವು
ಪುತ್ತೂರು:ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಮಿಷನ್, ತಾಲ್ಲೂಕು ಪಂಚಾಯತ್ ಪುತ್ತೂರು, ಗ್ರಾಮ ಪಂಚಾಯತ್ ಪಾಣಾಜೆ,ಗ್ರಾಮದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹತ್ತು ದಿನಗಳ ಕಾಲ ಸ್ವಚ್ಛ ಪುತ್ತೂರು ಬೃಹತ್ ಸ್ವಚ್ಚತಾ ಶ್ರಮದಾನ ಕಾರ್ಯಕ್ರಮ ನಡೆಯುತಿದ್ದು,ಪಾಣಾಜೆ ಗ್ರಾಮ ಪಂಚಾಯತ್ ನ ಶಾಲೆಗೆ ಭೇಟಿ ನೀಡಿ ಸ್ವಚ್ಚತೆಯ ಪರೀಶಿಲನೆ ಮಾಡಲಾಯಿತು.
ಗ್ರಾಮದ ಅಂಗಡಿ ಗಳಿಗೆ ತೆರಲಿ ಅಂಗಡಿ ಸುತ್ತಮುತ್ತ ಇರುವ ಕಸವನ್ನು ಅಂಗಡಿಯವರಲ್ಲಿ ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಸ್ವಚ್ಚತಾ ಅಭಿಯಾನದ ನೊಡಲ್ ಅಧಿಕಾರಿಯಾದ ಶ್ರೀಕಾಂತ್ ಬಿರಾವು ಮಾತನಾಡಿ ಗ್ರಾಮವು ಸ್ವಚ್ಚವಾಗಿರಿಸುವುದು ನಮ್ಮ ಆದ್ಯ ಕರ್ತವ್ಯ ,ಇನ್ನೂ ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ದಂಡ ವಿಧಿಸಲಾಯಿತು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೈಮುನತ್ತುಲ್ ಮೆಹ್ರ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸಂಜೀವಿನಿ ಸಂಜೀವಿನಿ ಪದಾಧಿಕಾರಿಗಳು ,ಊರವರು,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.