Published
3 days agoon
By
Akkare Newsಬಿಳಿಯೂರಿನ ಸರಕಾರಿ ಪ್ರಾಥಮಿಕ ಶಾಲೆಯಿಂದ ಮಾಡತ್ತಾರು ಪ್ರೌಢ ಶಾಲೆಯ ಭಾಗವನ್ನು ಸಂಪರ್ಕಿಸುವ ರಸ್ತೆಯು ಕೋಡ್ಲೆ ಪ್ರದೇಶದಲ್ಲಿ ಮಳೆ ನೀರಿನ ಕೊರೆತಕ್ಕೆ ಸಿಲುಕಿ ಚರಂಡಿ ನಿರ್ಮಾಣಗೊಂಡು ಶಾಲಾ ಮಕ್ಕಳ, ಹಾಲು ಉತ್ಪಾದಕರ ಹಾಗೂ ಇತರ ಎಲ್ಲಾ ಪಾದಾಚಾರಿಗಳ ಉಪಯೋಗಕ್ಕೆ ತೊಂದರೆಯಾಗಿತ್ತು. ಹಾಗಾಗಿ ಈ ಎರಡೂ ಭಾಗದ ಗ್ರಾಮಸ್ಥರು ಇಂದು ಜತೆ ಸೇರಿಕೊಂಡು ಯಂತ್ರದ ಮೂಲಕ ಮತ್ತು ಸ್ವತಃ ತಾವೇ ಶ್ರಮದಾನ ಮಾಡುವ ಮೂಲಕ ಈ ರಸ್ತೆಯನ್ನು ದುರಸ್ಥಿಗೊಳಿಸಿದರು.
ದಿನನಿತ್ಯ ಬಹುತೇಕ ಈ ಭಾಗದ ಜನರಿಗೆ ಹಾಗೂ ಮನೆಗಳಿಗೆ ಅಲ್ಲದೆ ಕೃಷಿ ಕಾರ್ಯಕ್ಕೆ ಬಳಸುವ ಏಕೈಕ ರಸ್ತೆ ಇದಾಗಿದ್ದು ಈ ರಸ್ತೆಯ ಅಭಿವೃದ್ಧಿ ಕೆಲಸ ನಡೆಯಬೇಕಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.