Published
6 months agoon
By
Akkare News

ನಂತರ ಮಸೀದಿಯ ಗುರುಗಳಾದ ಜನಾಬ್ ಬದ್ರುದ್ದಿನ್ ದಾರಿಮೀ ರವರ ನೇತೃತ್ವದಲ್ಲಿ ಮೀಲಾದ್ ಮೆರವಣಿಗೆ ನಡೆಯಿತು.
ಈ ಮೆರವಣಿಗೆಯಲ್ಲಿ ಸ್ಥಳೀಯ ಮದರಸ ವಿದ್ಯಾರ್ಥಿಗಳು ಜಮಾಹತ್ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಜಮಾಹತ್ ಸಮಿತಿಯು ಅಧೀನದಲ್ಲಿರುವ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯರು ಕಿರಿಯರು ಯವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.


ಈ ಮೆರವಣಿಗೆಯಲ್ಲಿ ಸ್ಥಳೀಯ ಮದರಸ ವಿದ್ಯಾರ್ಥಿಗಳ ದಫ್ ಕಾರ್ಯಕ್ರಮವು ಅಕರ್ಷಣಿಯವಾಗಿತ್ತು
ಸಹೋದರರಾದ ನಾವೆಲ್ಲರೂ ಪ್ರವಾದಿ ಮಹಮದ್ ಮುಸ್ತಫಾ(ಸ ಅ)ರವರ ತತ್ವ ಆದರ್ಶಗಳನ್ನು ಪಾಲಿಸೋಣವೆಂದು ಜಮಾಹತ್ ಸಮಿತಿಯು ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಸಲೀಮ್ ಕೊಲ್ಲಹಳ್ಳಿರವರು ತಮ್ಮ ಈದ್ ಮೀಲಾದ್ ಸಂದೇಶದಲ್ಲಿ ನುಡಿದರು. ಸದರ್ ಉಸ್ತಾದ್ ಸ್ವಾದೀಕ್ ಹನೀಫಿ ಅಲ್ ಅಶ್ ಅರಿ ರವರು ಸ್ವಾಗತಿಸಿ, ಕಾರ್ಯನಿರ್ವಾಹಣೆಗೈದರು
ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ










