Published
15 hours agoon
By
Akkare News
ಮುಂಬೈ: ಭಾವಿ ಪತಿ ಕೇತನ್ನನ್ನು (Ketan Agarwal) ಕೊಲೆಗೈದು ಬಂಧನಕ್ಕೊಳಗಾಗಿರುವ ಸಿಯಾಳ (Siya Goyal) ಕರಾಳ ಮುಖಗಳು ತನಿಖೆ ವೇಳೆ ಒಂದೊಂದಾಗಿ ಹೊರಬರುತ್ತಿದೆ. ಇದೀಗ ಮದುವೆ ಶಾಪಿಂಗ್ಗಾಗಿ ಸಿಯಾ, ಕೇತನ್ ಬಳಿ 1 ಕೋಟಿ ರೂ. ಹಣ ಪಡೆದು, ಅದನ್ನು ಪ್ರಿಯಕರ ಚೇತನ್ಗೆ ಕೊಟ್ಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕೇತನ್ ಅಗರ್ವಾಲ್ ಸಿಯಾ ಗೋಯಲ್ಗೆ ಮದುವೆಯ ಸಿದ್ಧತೆಗಳಿಗಾಗಿ 1 ಕೋಟಿ ರೂ.ಗಳನ್ನು ನೀಡಿದ್ದರು. ಅದನ್ನು ತನ್ನ ಪ್ರೇಮಿ ಚೇತನ್ ಚೌಧರಿಗೆ ನೀಡಿ ಉದ್ಯೋಗ ಹಾಗೂ ವ್ಯವಹಾರಕ್ಕಾಗಿ ಬಳಸುವಂತೆ ಹೇಳಿದ್ದಳು ಎಂದು ಮೂಲಗಳು ತಿಳಿಸಿವೆ.
ಮೂರು ವರ್ಷಗಳ ಬಳಿಕ ಮದುವೆ ಪ್ಲ್ಯಾನ್ ಚೇತನ್ ಆರ್ಥಿಕವಾಗಿ ದುರ್ಬಲ ಹಿನ್ನೆಲೆಯುಳ್ಳವನಾಗಿದ್ದಾನೆ. ಆತ ಆರ್ಥಿಕವಾಗಿ ಸ್ಥಿರವಾಗಲು ಕನಿಷ್ಠ ಮೂರು ವರ್ಷಗಳು ತಗಲುತ್ತದೆ. ಇದೇ ಕಾರಣಕ್ಕೆ ಇಬ್ಬರೂ 3 ವರ್ಷಗಳ ಬಳಿಕ ಮದುವೆಯಾಗಲು ಯೋಜನೆ ರೂಪಿಸಿದ್ದರು.
ಈ ವೇಳೆಗಾಗಲೇ ಜನರ ಗಮನದಿಂದ ಕೇತನ್ ಸಾವಿನ ವಿಚಾರ ಅಳಿಸಿ ಹೋಗಿರುತ್ತದೆ. ತನಿಖೆಯೂ ಮುಗಿದು ಹೋಗಿರುತ್ತದೆ ಎಂಬುದು ಕ್ರಿಮಿನಲ್ ಜೋಡಿಯ ಪ್ಲ್ಯಾನ್ ಆಗಿತ್ತು.

ಜೂನ್ 18 ರಂದು ಲೋಹಗಡ (Lohagad Fort) ಕೋಟೆಯ ಎತ್ತರದ ಪ್ರದೇಶದಿಂದ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರಿಯಕರ ಚೇತನ್ ಚೌಧರಿ (22) ತಳ್ಳಿ ಕೊಲೆಗೈದಿದ್ದರು. ಈ ಹತ್ಯೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರ ದೃಢಪಟ್ಟಿದೆ.



