Published
7 months agoon
By
Akkare News
ಪುತ್ತೂರು: 9/11 ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ, ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವ ಮೂಲಕ ಶಾಸಕ ಅಶೋಕ್ ರೈ ಯವರು ಜನ ಸಾಮಾನ್ಯರ ದ್ವನಿಯಾಗಿದ್ದಾರೆ.
ಕಳೆದ ಎರಡು ತಿಂಗಳಿಂದ 9/11 ಸಮಸ್ಯೆ ಸೃಷ್ಟಿಯಾಗಿದೆ. ಈ ಹಿಂದೆ ಗ್ರಾಪಂ ಮೂಲಕವೇ 9/11 ನೀಡಲಾಗುತ್ತಿತ್ತು. ಮನೆ ಕಟ್ಟುವವರು, ಸೈಟ್ ಗೆ ಲೋನ್ ಪಡೆಯುವಲ್ಲಿ 9/11 ಮಾಡಬೇಕಾಗಿದ್ದು ಕಡ್ಡಾಯವಾಗಿದೆ. ಗ್ರಾಪಂ ಮೂಲಕ ನಡೆಯುತ್ತಿದ್ದ ಈ ವ್ಯವಸ್ಥೆಯನ್ನು ಕಳೆದ ಎರಡು ತಿಂಗಳ ಹಿಂದೆ ಹೈಕೋರ್ಟು ಆದೇಶದಂತೆ ಬದಲಾವಣೆ ಮಾಡಿದ್ದು 9/11 ಪಡೆಯಬೇಕಾದರೆ ಮುಡಾ ಮೂಲಕವೇ ಪಡೆಯಬೇಕಿತ್ತು.
ಈ ಸಮಸ್ಯೆ ಗಂಭೀರವಾಗಿತ್ತು, ಏನೂ ಅರಿಯದ ಬಡ ಜನರು 9/11 ಗಾಗಿ ಕಷ್ಟಪಡುವಂತಾಗಿತ್ತು. ಮನೆ ಕಟ್ಟಬೇಕಾದಲ್ಲಿ ನರಕಯಾತನೆ ಅನುಭವಿಸಬೇಕಾಗಿತ್ತು, ಈ ಬಗ್ಗೆ ಅನೇಕರು ನನ್ನಲ್ಲಿ ನೋವು ಹೇಳಿಕೊಂಡಿದ್ದರು. ಸಚಿವರ ಜೊತೆ ಮಾತನಾಡಿದ್ದೇನೆ ಹತ್ತು ದಿನದೊಳಗೆ ಸಮಸ್ಯೆ ಇತ್ಯರ್ಥವಾಗಲಿದೆ.
ಅಶೋಕ್ ರೈ ಶಾಸಕರು ಪುತ್ತೂರು