Published
7 months agoon
By
Akkare Newsದಕ್ಷಿಣ//ಮಂಗಳೂರು ಕರ್ನಾಟಕದಲ್ಲಿ ವಾಸವಾಗಿರುವ ಪದವೀಧರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಪಶುಪಾಲನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೀಗಾಗಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.
ಒಟ್ಟು 400 ಹುದ್ದೆಗಳು ಖಾಲಿಯಿದ್ದು, ಅದನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಶು ವೈದ್ಯಾಧಿಕಾರಿ ಹುದ್ದೆ ಇದಾಗಿದ್ದು, ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುತ್ತದೆ. ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಒಟ್ಟು 400 ಹುದ್ದೆಗಳಿದ್ದು, ಈ ಪೈಕಿ ಕಲ್ಯಾಣ ಕರ್ನಾಟಕಕ್ಕೆ 14 ಪೋಸ್ಟ್ ಮೀಸಲಿಡಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 52,640 ರೂ. ಮಾಸಿಕ ವೇತನ ದೊರೆಯಲಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅಂಗೀಕೃತ ಪಶುವೈದ್ಯಕೀಯ ವಿಜ್ಞಾನ ವಿಶ್ವ ವಿದ್ಯಾನಿಲಯ ಅಥವಾ ಕೃಷಿ ವಿಶ್ವ ವಿದ್ಯಾನಿಲಯದಿಂದ ಬಿ.ವಿ.ಎಸ್.ಸಿ. / ಬಿ.ವಿ.ಎಸ್.ಸಿ ಆಯಂಡ್ ಎಎಚ್ ಪದವಿ ಪಡೆದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯ. ಪ್ರವರ್ಗ 2 ಎ, 2 ಬಿ, ಪ್ರವರ್ಗ 3 ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.
ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್ 14ರಿಂದ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನಾಂಕ ಜೂನ್ 24.