Connect with us

ಇತರ

ಬೆಳ್ತಂಗಡಿ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ 20ಕ್ಕೆ

Published

on

ಬೆಳ್ತಂಗಡಿ : ಪಟ್ಟಣದಲ್ಲಿ ಎ.20ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಬುಧವಾರ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ‘ಕಾರ್ಯಕರ್ತರ ಸಮಾವೇಶವನ್ನು ಯಶಸ್ಸುಗೊಳಿಸಬೇಕು.

ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನೆಯ ಕೈಪಿಡಿ ಬಿಡುಗಡೆ ಮಾಡಲಾಗುವುದು’ ಎಂದರು

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಟ, ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಕೆಪಿಸಿಸಿ ಸದಸ್ಯ ಕೇಶವ ಪಿ. ಬೆಳಾಲು, ಪಕ್ಷದ ಪ್ರಮುಖರಾದ ಸುಭಾಷ್ ಚಂದ್ರ ರೈ, ಲೋಕೇಶ್ವರಿ ವಿನಯ ಚಂದ್ರಗೌಡ, ವಂದನಾ ಭಂಡಾರಿ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯನ್ ಮಾಲಾಡಿ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ ಎಂ ಹಮೀದ್, ಅಲ್ಪಸಂಖ್ಯಾತ ಘಟಕದ ನಗರ ಸಮಿತಿಯ ಅಧ್ಯಕ್ಷ ಅಬ್ದುಲ್ ಕರಿಮ್ ಸೆಬಾಸ್ಟಿಯನ್, ನೇಮಿರಾಜ್ ಕಿಲ್ಲೂರು, ಜಯಾನಂದ ಪಿಲಿಕಲ, ಜಗದೀಶ್ ಡಿ, ಪ್ರಶಾಂತ್ ವೇಗಸ್‌, ರೋಹಿ ಪುದುವೆಟ್ಟು, ಮೆರಿಟಾ ಪಿಂಟೊ, ನಾಮದೇ ರಾವ್ ಮುಂಡಾಜೆ ಮತ್ತಿತರರು ಇದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement