Published
6 months agoon
By
Akkare Newsಪುತ್ತೂರು ಜೂ 29:ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮ ತಿಂಗಳಾಡಿ ಸಂಪರ್ಕಿಸುವ ಆಲಡ್ಕ ಪರಿಸರದಲ್ಲಿ ಜೋರು ಮಳೆಗೆ ಬಿದ್ದ ಮರ ಹಾಗೂ ಬಾಗಿದ ವಿದ್ಯುತ್ ಕಂಬಗಳ ಬಗ್ಗೆ ಸಾರ್ವಜನಿಕರು ಶಾಸಕರ ಕಚೇರಿಗೆ ಮಾಹಿತಿ ನೀಡಿದ್ದರು. ತಕ್ಷಣ ಶಾಸಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಮರವನ್ನು ತೆರವುಗೊಳಿಸಿ, ಮುಂದೆ ಬರುವ ಅನಾಹುತವನ್ನು ತಪ್ಪಿಸಿದ್ದಾರೆ.
ಸ್ಥಳೀಯ ಸಾರ್ವಜನಿಕರ ಪರವಾಗಿ ಮೆಸ್ಕಾಂ ನಿರ್ದೇಶಕ ರಾಮಚಂದ್ರ ಹಾಗೂ J. E. ಯೋಗೀಶ್ ಮತ್ತು ಅವರ ಸಿಬ್ಬಂದಿಗಳಿಗೆ ಮತ್ತು ಮೆಸ್ಕಾಂ ಕುಂಬ್ರ ವಲಯ ನಾಮ ನಿರ್ದೇಶಿತ ಸಲಹಾ ಸಮಿತಿ ಸದಸ್ಯೆ ಅರುಣಾ ಕುಮಾರಿ ಮತ್ತು ಶಾಸಕರ ಆಪ್ತ ಸಹಾಯಕ ಲಿಂಗಪ್ಪ ಇವರಿಗೆ ಕೃಜ್ಞತೆಗಳುಗಳನ್ನು ಅಶೋಕ್ ರೈ ಮಹಿಳಾ ಬ್ರಿಗೇಡ್ ನವರು ಸಲ್ಲಿಸಿರುತ್ತಾರೆ.