ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಪುತ್ತೂರು ದೇವಸ್ಯ ಗುಮ್ಮಟಗದ್ದೆ ರಸ್ತೆಯಲ್ಲಿ ಬಸ್ ಸಂಚಾರ ಆರಂಭ ಅಜ್ಜಿಕಲ್ಲಿನಲ್ಲಿ ಸಾರ್ವಜನಿಕರಿಂದ ಸ್ವಾಗತ

Published

on

ಪುತ್ತೂರು ನಿಡ್ನಳ್ಳಿ ಜುಲೈ.09: ಪುತ್ತೂರಿನಿಂದ ಪರ್ಲಡ್ಕ ಕುಂಜೂರುಪಂಜ ದೇವಸ್ಯ ವಳತ್ತಡ್ಕ ಅಜ್ಜಿಕಲ್ಲು ಮಾರ್ಗವಾಗಿ ಗುಮ್ಮಟಗದ್ದೆಗೆ ಕೆ.ಎಸ್.ಅರ್.ಟಿ.ಸಿ ಬಸ್ ಸಂಚಾರ ಜು.09 ರಂದು ಆರಂಭ ಗೊಂಡಿತು.ಬೆಳಿಗ್ಗೆ ಸಂಚಾರ ಆರಂಭಿಸಿದ ಬಸ್ಸು ಅಜ್ಜಿಕಲ್ಲು ತಲುಪಿದಾಗ ಸೇರಿದ್ದ ಸಾರ್ವಜನಿಕರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಶಶಿಕಿರಣ್ ರೈ ನೂಜಿಬೈಲು ಮಾತನಾಡಿ ಸುಮಾರು ನಲವತ್ತು ವರ್ಷಗಳ ಈ ಭಾಗದ ಜನರ ಬೇಡಿಕೆ ಇಂದು ಈಡೇರಿದೆ. ಈ ರಸ್ತೆಯಲ್ಲಿ ಕೆಂಪು ಬಸ್ಸನ್ನು ಕಾಣಬೇಕು ಎಂಬ ಪ್ರಯತ್ನಕ್ಕೆ ಈ ಭಾಗದ ಜನರ ಹೋರಾಟದ ಫಲ ಇಂದು ಸಫಲವಾಗಿದೆ.ಸರಕಾರದ ಎಲ್ಲಾ ಸವಲತ್ತುಗಳು ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಗಬೇಕು ಎಂಬ ಆಸೆ ಇತ್ತು. ಇದನ್ನು ಈಡೇರಿಸಿದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಈ ಭಾಗದ ಜನರ ಪರವಾಗಿ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದರು.

 

ಸಂತೋಷ್ ಕುಮಾ‌ರ್ ರೈ ಚಿಲ್ಕೆತ್ತಾರು ಮಾತನಾಡಿ ಹಿಂದೆ ಈ ರಸ್ತೆ ಗುಂಡಿಗಳಿಂದ ಕೂಡಿತ್ತು. ಅದನ್ನು ಹಿಂದಿನ ಶಾಸಕಿ ಶಕುಂತಲಾ ಶೆಟ್ಟಿ ದುರಸ್ತಿ ಮಾಡಿಸಲು ಆರಂಭಿಸಿ ನಂತರ ಬಂದ ಶಾಸಕ ಸಂಜೀವ ಮಠಂದೂರು ಮುಂದುವರಿಸಿ ರಸ್ತೆ ನಿರ್ಮಾಣ ಆಯಿತು. ಚೆಲ್ಯಡ್ಕದಲ್ಲಿ ನೂತನ ಸೇತುವೆ ನಿರ್ಮಾಣದ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಅದಕ್ಕೂ ನೂತನ ಸೇತುವೆ ನಿರ್ಮಾಣಕ್ಕೆ ಶಾಸಕ ಆಶೋಕ್‌ ಕುಮಾರ್ ರೈ ಮೂರು ಕೋಟಿ ಅನುದಾನ ಬಿಡುಗಡೆ ಗೊಳಿಸಿದ್ದು ಬೇಸಿಗೆ ಕಾಲ ಆರಂಭದಲ್ಲಿ ಕಾಮಗಾರಿ ಆರಂಭವಾಗಿ ಆದಷ್ಟು ಬೇಗ ಅದರ ಉದ್ಘಾಟನೆ ಆಗಲಿದೆ. ಸಿದ್ದರಾಮಯ್ಯ ಸರಕಾರ ಆರಂಭಿಸಿದ ಭಾಗ್ಯ ಕೆಂಪು ಬಸ್ಸಲ್ಲಿ ಫ್ರೀಯಾಗಿ ಹೋಗುವ ಅವಕಾಶ ನಮಗೆ ಸಿಗಲಿಲ್ಲವಲ್ಲ ಎಂಬ ಕೊರಗು ಈ ಭಾಗದ ಮಹಿಳೆಯರಲ್ಲಿ ಇತ್ತು. ಇದೀಗ ಬಸ್ಸು ಬಂದು ಈ ಭಾಗದ ಮಹಿಳೆಯರಿಗೂ ಅವಕಾಶ ಮಾಡಿದ ಶಾಸಕರನ್ನು ಅಭಿನಂದಿಸಿದರು.

ವಾರ್ಡ್ ಸಮಿತಿ ಅಧ್ಯಕ್ಷ ಮನೋಜ್ ಗೌಡ ದೇವಸ್ಯ, ಭಗವಾನ್ ದಾಸ್ ರೈ ಚಿಲ್ಕೆತ್ತಾರು, ಶಶಿರಾಜ್ ರೈ ಚಿಲ್ಕೆತ್ತಾರು, ಸಂದೀಪ್ ರೈ ಚಿಲ್ಕೆತ್ತಾರು, ರವಿ ಮುಂಡೊವುಮೂಲೆ, ಪುರಂದರ ನಾಯ್ಕ ಅಜ್ಜಿಕಲ್ಲು, ರಾಜೇಶ್ ರೈ ನೀರ್ಪಾಡಿ, ಮಹಮ್ಮದ್ ಅಜ್ಜಿಕಲ್ಲು, ಪದ್ಮನಾಭ ಪೂಜಾರಿ ಅಜ್ಜಿಕಲ್ಲು ಈಶ್ವರ ಪ್ರಸನ್ನ ಕೇರಿ, ಧನಂಜಯ ಪೂಜಾರಿ, ಮಮತಾ ರೈ ಮಡಪ್ಪಾಡಿ, ದಿನೇಶ ನಾಯ್ಕ,ಕೆ.ಎಸ್.ಅರ್.ಟಿ.ಸಿ ಡಿಪೋ ಮೆನೇಜ‌ರ್, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement