Published
5 months agoon
By
Akkare News
ಪುತ್ತೂರು: ಪುತ್ತೂರಿನಿಂದ ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಪ್ರಾರಂಭ ಮಾಡುವಲ್ಲಿ ಇಲಾಖೆಯ ಅನುಮತಿಯ ಕುರಿತು ಸಾರಿಗೆ ಇಲಾಖೆಯಕಮಿಷನರ್ ಯೋಗಿಶ್ ರವರ ಜೊತೆ ಶಾಸಕ ಅಶೋಕ್ ರೈ ಮಾತುಕತೆ ನಡೆಸಿದ್ದಾರೆ.
ಕಾಟುಕುಕ್ಕೆಗೆ ಅಂತರಾಜ್ಯ ಬಸ್ ಸೇವೆಗೆ ಪರವಾನಿಗೆ ಅಗತ್ಯವಾಗಿದೆ. ಈ ಹಿಂದೆ ಕಾಟುಕುಕ್ಕೆಗೆ ಇದ್ದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಿಂದ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿಗೆ ಅನೇಕ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದು ಬಸ್ ಸಂಚಾರವಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ.
ಶೀಘ್ರವೇ ಅಂತರಾಜ್ಯ ಪರವಾನಿಗೆಯನ್ನುಮಂಜೂರು ಮಾಡುವಂತೆ ಶಾಸಕರು ಕಮಿಷನರ್ ಗೆ ಮನವಿ ಸಲ್ಲಿಸಿದರು.