Published
5 months agoon
By
Akkare News
ಕೋಡಿಂಬಾಡಿ,ಜು 12,ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಕೊಡಿಮರ ಅಂಗನವಾಡಿಯ ಪರಿಸರದಲ್ಲಿ ‘ಪರಿಸರ ದಿನಾಚರಣೆ”ಯನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಫ್ಫ್ರೈಡ್, ಕೋಡಿಂಬಾಡಿ ಶಾಲಾ ಮುಖ್ಯ ಗುರುಗಳಾದ ಬಾಲಕೃಷ್ಣ ಎನ್, ಬೆಳ್ಳಿಪ್ಪಾಡಿ ಶಾಲಾ ಮುಖ್ಯ ಗುರುಗಳಾದ ಯಶೋದಾ, ಅಂಗನವಾಡಿ ಕಾರ್ಯಕರ್ತೆಯರಾದ ರೇವತಿ, ವೀಣಾ, ಮತ್ತು ಸ್ವಚ್ಛತಾ ವಾಹಿನಿ ಯವರು, ಪಂಚಾಯತ್ ಸಿಬ್ಬಂದಿಗಳು, ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.