Published
4 months agoon
By
Akkare Newsಆ.21- ಸವಣೂರು ಗ್ರಾ.ಪಂ.ಕಚೇರಿ.
ಆ.22 ನೆಟ್ಟಣಿಗೆ ಮುಡೂರು ಗ್ರಾ.ಪಂ.ಕಚೇರಿ.
ಆ.23ಬೆಟ್ಟಂಪಾಡಿ ಗ್ರಾ.ಪಂ.ಸಭಾಭವನ
ಪುತ್ತೂರು: ಕೆ.ಇ.ಆರ್.ಸಿ. ಹಾಗೂ ರಾಜ್ಯ ಸರಕಾರದ ಆದೇಶದಂತೆ ಮೆಸ್ಕಾಂ ಇಲಾಖೆಯ ಎಲ್ಲಾ ಕೃಷಿ ನೀರಾವರಿಯ ಪಂಪ್ ಸೆಟ್ ಗಳಿಗೆ ಸಹಾಯಧನವನ್ನು ಮುಂದುವರಿಸಲು ಆಧಾರ್ ಕಾರ್ಡ್ ಜೋಡಾವಣೆಯು ಕಡ್ಡಾಯಗೊಳಿಸಿದ್ದು ರೈತರ ಅನುಕೂಲಕ್ಕಾಗಿ ಮೆಸ್ಕಾಂ ಕುಂಬ್ರ ಉಪವಿಭಾಗ ವ್ಯಾಪ್ತಿಯ ಸವಣೂರು, ನೆಟ್ಟಣಿಗೆ ಮುನ್ನೂರು ಹಾಗೂ ಬೆಟ್ಟಂಪಾಡಿಯಲ್ಲಿ ಒಂದು ದಿನದ ವಿಶೇಷ ಶಿಬಿರವನ್ನು ನಡೆಸಲಿದೆ.
ಆ.21- ಸವಣೂರು ಗ್ರಾ.ಪಂ.ಕಚೇರಿ, ಆ.22 ನೆಟ್ಟಣಿಗೆ ಮುನ್ನೂರು ಗ್ರಾ.ಪಂ.ಕಚೇರಿ, ಆ.23ಬೆಟ್ಟಂಪಾಡಿ ಗ್ರಾ.ಪಂ.ಸಭಾಭವನದಲ್ಲಿ ಶಿಬಿರಗಳು ನಡೆಯಲಿದೆ.
ಕೃಷಿ ಬಳಕೆದಾರರು ಆಧಾರ್ ಕಾರ್ಡಿನ ಜೊತೆಗೆ ಪಂಪ್ ಸೆಟ್ಗಳ (ಆರ್.ಆರ್ ನಂಬರ್) ಸಂಬಂಧಿಸಿದ ಸ್ಥಾವರ ಸಂಖ್ಯೆ,ಜಾಗಕ್ಕೆಸಂಬಂಧಿಸಿದಲಭ್ಯವಿರುವಯಾವುದೇದಾಖಲೆಗಳನ್ನು(ಆರ್.ಟಿ.ಸಿ,ಕ್ರಯಚೀಟು,ವೀಲುನಾಮೆ ಇನ್ನಿತರ )ಪಡೆದುಕೊಂಡು ಶಿಬಿರದಲ್ಲಿ ಭಾಗವಹಿಸಿ ಆಧಾರ್ ಜೋಡಣೆ ಮಾಡಿಸಬಹುದಾಗಿದೆ.
ಅದಾರ್ ಜೋಡಣೆ ಪ್ರಕ್ರಿಯೆಯುಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕಗಳನ್ನುಪಾವತಿಸುವ ಅಗತ್ಯವಿರುವುದಿಲ್ಲ ಎಂದು ಮೆಸ್ಕಾಂ ನಪ್ರಕಟಣೆ ತಿಳಿಸಿದೆ.