Published
4 months agoon
By
Akkare Newsಪುತ್ತೂರು: ಕೊರೋನಾ ಸಮಯದಲ್ಲಿ ಸ್ಥಗಿತಗೊಂಡಿದ್ದ ಪುತ್ತೂರು – ಅಳಿಕೆ ಬಸ್ ಸಂಚಾರ ಆ.30 ರಿಂದ ಆರಂಭವಾಗಿದ್ದು ಅಳಿಕೆಯಲ್ಲಿ ಗ್ರಾಮಸ್ಥರು ಸ್ವಾಗತಿಸಿದರು
ಕೊರೊನಾ ಬಳಿಕ ಸ್ಥಗಿತಗೊಂಡಿದ್ದ ಕೆಎಸ್ ಆರ್ ಟಿ ಸಿ ಬಸ್ ವ್ಯವಸ್ಥೆಯನ್ನು ಪುನರಾರಂಭ ಮಾಡುವಂತೆ ಅಳಿಕೆ ಗ್ರಾಪಂ ಅಧ್ಯಕ್ಷ ರಾದ ಪದ್ಮನಾಭಪೂಜಾರಿ ನಿಯೋಗ ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿತ್ತು. ವಾರದೊಳಗೆ ಬಸ್ ಪುನರಾರಂಭ ಮಾಡುವಂತೆ ಅಧಿಕಾರಿಗೆ ಶಾಸಕರು ಸೂಚನೆಯನ್ನು ನೀಡಿದ್ದರು.
ಆ. 30 ರಿಂದ ಸಂಚಾರ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಅಳಿಕೆ ಗ್ರಾಪಂ ಸದಸ್ಯರುಗಳಾದ ಸದಾಶಿವ ಶೆಟ್ಟಿ,ಸರಸ್ವತಿ, ಶಾಂಭವಿ, ರಮೇಶ್ ,ಮಾಜಿ ಸದಸ್ಯರಾದ ಸುಧಾಕರ್, ಸ್ಥಳೀಯರಾದ ಬಾಲಕೃಷ್ಣ ಪೂಜಾರಿ, ಶರತ್, ಚಿದಾನಂದ, ಶೋಭಾಚಾರ್ಯ, ವಿಜಯ, ಈಶ್ವರ ಮೂಲ್ಯ, ಹಂಝ ಚೆಂಡುಕಲ, ಇಮ್ರಾನ್ ಪಡೀಲ್, ಪದ್ಮನಾಭ ಗೌಡ ಉಪಸ್ಥಿತರಿದ್ದರು.