ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 4.64 ಕೋಟಿ ರೂ ಕಾಮಗಾರಿಗೆ ಗುದ್ದಲಿಪೂಜೆ:ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ: ಶಾಸಕ ಅಶೋಕ್ ರೈ

Published

on

ಬಿಜೆಪಿ ಆಡಳಿತದಲ್ಲಿ ಅಭಿವೃದ್ದಿ ಶೂನ್ಯವಾಗಿತ್ತು: ಮಹಮ್ಮದಾಲಿ

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು ೪.೬೪ ಕೋಟಿ ರೂ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದ್ದು ನಗರಸಭಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂಬುದು ಜನರಿಗೆ ಅರಿವಿದೆ, ವಿವಿಧ ಬೇಡಿಕೆಗಳ ಪಟ್ಟಿಯೇ ಸಾರ್ವಜನಿಕರಿಂದ ಬಂದಿತ್ತು. ಹಂತ ಹಂತವಾಗಿ ಜನರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಏಕಕಾಲದಲ್ಲಿ ೪ ಕೋಟಿಗೂ ಮಿಕ್ಕಿ ಅನುದಾನವನ್ನು ತಂದಿದ್ದೇವೆ. ಎಲ್ಲಾ ವಾರ್ಡುಗಳ ಅಭಿವೃದ್ದಿಗೂ ಅನುದಾನವನ್ನು ಸಮಾನ ಪ್ರಮಾಣದಲ್ಲಿ ಹಂಚಿಕೆ ಮಾಡಿದ್ದೇವೆ ಎಲ್ಲೂ ರಾಜಕೀಯ ಮಾಡಿಲ್ಲ, ಇನ್ನು ಮುಂದೆಯೂ ಮಾಡುವುದಿಲ್ಲ. ರಾಜಕೀಯದಲ್ಲಿ ರಾಜಧರ್ಮವನ್ನು ಪಾಲಿಸುವ ಮೂಲಕ , ಕ್ಷೇತ್ರದ ಅಥವಾ ವಾರ್ಡಿನ ಜನರ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಮಾಡಿದ್ದೇವೆ. ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ನಾನು ಏನೂ ಹೇಳುವುದಿಲ್ಲ, ನಾವು ಮುಂದೆ ಅಭಿವೃದ್ದಿ ಮಾಡಿಯೇ ಮಡುತ್ತೇವೆ ಎಂದು ಶಾಸಕರು ಹೇಳಿದರು.

ನಗರಸಭಾ ವ್ಯಾಪ್ತಿಯ ಅನೇಕ ರಸ್ತೆಗಳಿಗೆ ಇಂದು ಗುದ್ದಲಿಪೂಜೆ ನಡೆಸಲಾಗಿದೆ, ಇವುಗಳ ಪ್ಯಕಿ ಅನೇಕ ವರ್ಷಗಳ ಬೇಡಿಕೆಯ ರಸ್ತೆಗಳನ್ನು ಪರಿಗಣಿಸಲಾಗಿದೆ. ಜನರಿಗೆ ರಸ್ತೆ, ಕುಡಿಯುವ ನೀರು ಜೊತೆಗೆ ಸೂರು ಕಲ್ಪಿಸುವುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

ನಮ್ಮದು ಅಭಿವೃದ್ದಿಯ ಬೀಜ ಬಿತ್ತಿದ್ದೇವೆ ವಿಷ ಬೀಜವಲ್ಲ

ಅಧಿಕಾರವಿದ್ದಷ್ಟು ದಿನ ಜನರ ಸೇವೆ ಮಾಡಬೇಕು, ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಪರಿಹಾರವನ್ನು ಒದಗಿಸಬೇಕು, ಬಡವರ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಜನರನ ಭಾವನೆಯನ್ನು ಕೆರಳಿಸುತ್ತಲೇ ಇದ್ದು , ವಿಷ ಬೀಜವನ್ನು ಬಿತ್ತಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಎಂದೂ ಮಾಡುವುದಿಲ್ಲ ನಾವು ಅಭಿವೃದ್ದಿಯ ಬೀಜವನ್ನು ಬಿತ್ತುವ ಮೂಲಕ ಕ್ಷೇತ್ರದ ಅಭಿವೃದ್ದಿ ಮಾಡುತ್ತೇವೆ ಎಂದು ಶಾಸಕರು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ಪ್ರತೀ ಕುಟುಂಬ ನೆಮ್ಮದಿಯಾಗಿದೆ

ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಯಿಂದಾಗಿ ಇಂದು ಪ್ರತೀ ಕುಟುಂಬ ನೆಮ್ಮದಿಯು ಜೀವನ ನಡೆಸುವಂತಾಗಿದೆ. ತಿಂಗಳಿಗೆ ೨೦೦೦ , ಉಚಿತ ಕರೆಂಟ್, ಅಕ್ಕಿ, ಬಸ್ ಫ್ರೀ ಹೀಗೇ ಐದು ಗ್ಯಾರಂಟಿಗಳು ಕುಟುಂಬಗಳಿಗೆ ಆಧಾರವಾಗಿ ಕೆಲಸ ಮಾಡುತ್ತಿದೆ. ಕುಟುಂಬದ ಪ್ರತೀ ಮಹಿಳೆಗೆ ತಿಂಗಳಿಗೆ ಸರಕಾರಿ ಸಂಬಳ ಮಾದರಿಯಲ್ಲಿ ಸರಕಾರ ಖಾತೆಗೆ ಹಣ ಜಮೆ ಮಾಡುತ್ತಿದೆ. ಇದುವರೆಗೂ ಕರ್ನಾಟಕದಲ್ಲಿ ಆಡಳಿತ ನಡೆಸಿದ ಸರಕಾರ ಇಂಥಹ ಯೋಜನೆಯನ್ನು ಜಾರಿ ಮಾಡಿಲ್ಲ, ಇನ್ನು ಮುಂದೆ ಕಾಂಗ್ರೆಸ್ ಬಿಟ್ಟು ಬೇರೆ ಯವುದೇ ಸರಕಾರ ಜನರಿಗೆ ಈ ಗ್ಯಾರಂಟಿಯನ್ನು ಕೊಡುವುದೇ ಇಲ್ಲ ಎಂದು ಹೇಳಿದರು.

 

ಉದ್ಯಮ ಮತ್ತು ಉದ್ಯೋಗ ಬೇಕಿದೆ

ಪುತ್ತೂರಿನಲ್ಲಿ ಉದ್ಯಮ ಬೆಳೆಯಬೇಕು ಜೊತೆಗೆ ಯುವಕರ ಕೈಗೆ ಉದ್ಯೋಗವನ್ನು ನೀಡಬೇಕಿದೆ. ಉದ್ಯಮ ಬೆಳೆದರೆ ಮಾತ್ರ ಯಾವುದೇ ಕ್ಷೇತ್ರಗಳು ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ . ಈಗಾಗಲೇ ಪುತ್ತೂರಿನಲ್ಲಿ ಅನೇಕ ಉದ್ಯಮಿಗಳು ಉದ್ಯಮ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದಾರೆ ಅವರಿಗೆ ಬೇಕಾದ ಮೂಲ ಭೂತ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಿಕೊಡಲಾಗುತ್ತದೆ ಎಂದು ಹೇಳಿದರು. ಯುವಕರನ್ನು ರಾಜಕೀಯ ವ್ಯಕ್ತಿಗಳು ಬೇರೆ ಬೇರೆ ಕೆಲಸಗಳಿಗೆ ಬಳಕೆ ಮಾಡುತ್ತಾರೆ ಬಳಿಕ ಅವರನ್ನು ದಿಕ್ಕು ದೆಸೆಯಿಲ್ಲದೆ ಮಾಡುತ್ತಾರೆ. ಸಮಾಜ ದ್ರೋಹಿ ಕೆಲಸಗಳಿಗೆ ಯುವಕರನ್ನು ಬಳಸಿ ಬಳಿಕ ಅವರನ್ನು ನಡುನೀರಿನಲ್ಲಿ ಕೈ ಬಿಡುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು ಯುವ ಸಮೂಹ ಈ ಕುತಂತ್ರಕ್ಕೆ ಬಲಿಯಾಗದೆ ಉದ್ಯೋಗವನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು ಹೇಳಿದರು.

ನಗರಸಭಾ ಅನುದಾನವಲ್ಲ

ಇವತ್ತು ನಡೆದಿರುವ ಕಾಮಗಾರಿ ನಗರಸಭಾ ಅನುದಾನವಲ್ಲ. ವಿವಿಧ ಇಲಾಖೆಗೆ ಮನವಿ ಸಲ್ಲಿಸಿ ಆ ಮೂಲಕ ಸರಕಾರದಿಂದ ಬಂದಿರುವ ಅನುದಾನವಾಗಿದ್ದು ೪.೬೪ ಲಕ್ಷ ಅನುದಾನದಲ್ಲಿ ನಗರಸಭಾ ಅನುದಾನ ಇಲ್ಲವೇ ಇಲ್ಲ ಎಂದು ಶಾಸಕರು ಹೇಳಿದರು.

ಎಲ್ಲಾ ವಾರ್ಡುಗಳಿಗೂ ಅನುದಾನವನ್ನು ಹಂಚಿದ್ದಾರೆ: ಮಹಮ್ಮದಾಲಿ

ಶಾಸಕರು ಅನುದಾನ ಹಂಚಿಕೆಯಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. ಬೇಡಿಕೆಗೆ ಅನುಗುಣವಾಗಿ ಎಲ್ಲಾ ವಾರ್ಡುಗಳಿಗೂ ಸಮಾನ ಪ್ರಮಾಣದಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ. ಈ ಹಿಂದೆ ನಗರಸಭಾ ಆಡಳಿತ ನಡೆಸಿದ್ದ ಬಿಜೆಪಿ ಜನರ ಸಮಸ್ಯೆಯನ್ನು ಆಲಿಸಿಲ್ಲ, ರಸ್ತೆ, ಚರಂಡಿ ಕಾಮಗಾರಿಗಳಿಗೆ ಅನುದಾನ ನೀಡುವಲ್ಲಿಯೂ ರಾಜಕೀಯ ಮಾಡಿದ್ದರು ಆದರೆ ಕಾಂಗ್ರೆಸ್ ಎಂದೂ ಅಭಿವೃದ್ದಿಯಲ್ಲಿ ರಾಜಕೀಯ ಮಾಡಿಲ್ಲ ಎಂದು ಹೇಳಿದರು. ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂಬುದು ಜನರಿಗೆ ಗೊತ್ತಾಗಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆಯನ್ನು ಈ ಬಾರಿ ಅಭಿವೃದ್ದಿ ಮಾಡಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ದಿ ಅನುದಾನದಿಂದ ಮಸೀದಿ ಮತತು ಚರ್ಚ್ ರಸ್ತೆಯ ಅಭಿವೃದ್ದಿಗೆ ಅನುದಾನವನ್ನು ಮೀಸಲಿಡಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಶಾಸಕರು ಇನ್ನಷ್ಟು ಅನುದಾನವನ್ನು ನೀಡುವ ಮೂಲಕ ಎಲ್ಲಾ ವಾರ್ಡುಗಳನ್ನು ಅಭಿವೃದ್ದಿ ಮಾಡಲಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ಹೇಳಿದರು.

ಗುದ್ದಲಿಪೂಜೆ ನಡೆದಿರುವ ಕಾಮಗಾರಿಗಳು:

ತಾರಿಗುಡ್ಡೆ ಯೂಸುಫ್ ರವರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ ೫ ಲಕ್ಷ , ತಾರಿಗುಡ್ಡೆ ಸೌಹಾರ್ದ ಯುವಕ ಮಂಡಲ ಕಛೇರಿ ಎದುರು ಹಾದು ಹೋಗುವ ರಸ್ತೆ ಅಭಿವೃದ್ಧಿ ೫ ಲಕ್ಷ, ಸಾಲ್ಮರ ಸಯ್ಯದ್ ಮಲೆ ಮಸೀದಿ(ಮದ್ರಸ)ಕ್ಕೆ ಹೋಗುವ ರಸ್ತೆ ಅಭಿವೃದ್ಧಿ ೫ ಲಕ್ಷ, ಚಿಕ್ಕ ಮುಡ್ನೂರು ಗ್ರಾಮದ ಕೆಮ್ಮಾಯಿಯಿಂದ ಮೂಡಾಯೂರಿಗೆ ಹೋಗುವ ರಸ್ತೆಯಲ್ಲಿ ಪ್ರಥಮ ಎಡಕ್ಕೆ ತಿರುಗುವ ರಸ್ತೆ ಅಭಿವೃದ್ಧಿ ಕಾಮಗಾರಿ ೩ ಲಕ್ಷ,

ಬನ್ನೂರು ಜನತಾ ಕಾಲೋನಿಯಲ್ಲಿ ಕಾಂಕ್ರೀಟ್ ಚರಂಡಿ ರಚನೆ ಕಾಮಗಾರಿ ೮ಲಕ್ಷ, ಬನ್ನೂರು ಲೇಡೀಸ್ ಹಾಸ್ಟೆಲ್ ರಸ್ತೆಗೆ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ೮ಲಕ್ಷ ,ಪಡ್ನೂರು-ಗುರುಂಪುನಾರ್ ಅಲ್ಪಸಂಖ್ಯಾತರ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿ ೮ಲಕ್ಷ, ಉರ್ಲಾಂಡಿ ಬೈಪಾಸಿನಿಂದ ಎಡ್ವರ್ಡ್ ರವರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ೦೨.೭೫ ಲಕ್ಷ, ಪುತ್ತೂರು ನಗರಸಭಾ ವ್ಯಾಪ್ತಿಯ ಕೋರ್ಟು ರಸ್ತೆ- ಬೀದಿಮಜಲು ಸಂತ ವಿಕ್ಟರ್ ನ ಬಾಲಿಕಾ ಪ್ರೌಢಶಾಲೆಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ.೧೦ ಲಕ್ಷ,ಬಪ್ಪಳಿಗೆ ಮಸ್ಜಿದುನ್ನೂರ್ ನೂರುಲ್ ಹುದಾ ಮಸೀದಿಯ ಕಬರ್ ಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ೧೦ ಲಕ್ಷ , ನಗರಸಭಾ ವ್ಯಾಪ್ತಿಯ ಬಳ್ಪಳಿಗೆ ಅಲ್ಪಸಂಖ್ಯಾತರ ಜನತಾ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ೫ ಲಕ್ಷ ,ಉಪ್ಪಳಿಕೆ ಕರ್ಕುಂಜ ಅಲ್ಪಸಂಖ್ಯಾತರ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿ ೫ ಲಕ್ಷ, ನಗರಸಭಾ ವ್ಯಾಪ್ತಿಯ ಬಪ್ಪಳಿಗೆ ಕರ್ಕುಂಜ ಎಸ್. ಕೆ. ಇಬ್ರಾಹಿಂರವರ ಮನೆಯ ಬಳಿಯಿಂದ ಹಾದು ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ೫ ಲಕ್ಷ, ನಗರಸಭಾ ವ್ಯಾಪ್ತಿಯ ಬಪ್ಪಳಿಗೆ ಮುಖ್ಯ ರಸ್ತೆಯಿಂದ ನಿವೃತ್ತ ಅಬಕಾರಿ ಇನ್ಸ್ಪೆಕ್ಟರ್ ಯಾಕೂಬ್ ಖಾನ್ ರವರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ ೧೦ ಲಕ್ಷ, ನಗರಸಭಾ ವ್ಯಾಪ್ತಿಯ ಉಜ್ರುಪಾದೆ ಮಸೀದಿ ಬಳಿ ಹಾದುಹೋಗುವ ಅಲ್ಪಸಂಖ್ಯಾತರ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿ ೫ಲಕ್ಷ , ಬಲ್ನಾಡು ಆನಂದ ಸಾಗರ ಕುಂಡಡ್ಕ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿ ೫ ಲಕ್ಷ , ಕಾಜಲು ಮಸೀದಿ ರಸ್ತೆಯ ಅಭಿವೃದ್ಧಿ ಕಾಮಗಾರಿ. ೫ ಲಕ್ಷ ,ನಗರಸಭಾ ವ್ಯಾಪ್ತಿಯ ಒಂದನೇ ವಾರ್ಡಿನ ಲಿಂಗನಗುಡ್ಡೆ ರಸ್ತೆ ಮತ್ತು ಮೆಟ್ಟಿಲು ಅಭಿವೃದ್ಧಿ ಕಾಮಗಾರಿ ೦೪.೫೦ಲಕ್ಷ, ನಗರಸಭಾ ವ್ಯಾಪ್ತಿಯ ಕಲ್ಲೆಗ ಅಲ್ಪಸಂಖ್ಯಾತರ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಮೊತ್ತ: ೫ ಲಕ್ಷ ರೂ ಬಿಡುಗಡೆಯಾಗಿದ್ದು ಕಾಮಗಾರಿಗೆ ಶಾಸಕರುಗುದ್ದಲಿಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ರಸಾದ್ ಆಳ್ವ, ಮುರಳೀಧರ್ ರೈ ಮಠಂತಬೆಟ್ಟು, ಈಶ್ವರಭಟ್ ಪಂಜಿಗುಡ್ಡೆ, ಉಮಾನಾಥ ಶೆಟ್ಟಿ ಪೆರ್ಪೆ, ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಪಿ ಶೆಟ್ಟಿ ಕಲ್ಲಾರೆ, ರೋಶನ್ ರೈ ಬನ್ನೂರು, ಸಾಹಿರಾ ಬಾನು, ಲೋಕೇಶ್ ಪಡ್ಡಾಯೂರು, ಇಸ್ಮಾಯಿಲ್ ಸಾಲ್ಮರ, ಯೂಸುಫ್ ತಾರಿಗುಡ್ಡೆ, ಜಾನಕಿ ಮುರ, ರಶೀದ್ ಮುರ, ನಗರಸಭಾ ಸದಸ್ಯರಾದ ರೋಬಿನ್ ತಾವ್ರೋ, ದಿನೇಶ್ ಶೇವಿರೆ, ಶಾರದಾ ಅರಸ್, ಚಿದಾನಂದ ರೈ, ಮಂಜುನಾಥ , ದಾಮೋದರ್ ಭಂಡಾರ್ಕರ್, ಸೈಮನ್ ಗೊನ್ಸಾಲಿಸ್, ವಿಕ್ಟರ್ ಪಾಯಸ್, ಹರೀಶ್ ಆಚಾರ್ಯ, ಕಲಾವಿದ ಕೃಷ್ಣಪ್ಪ, ಹಾಶಿಂ ಕಲ್ಲೆಗ, ನವಾಝ್ ಕಾರ್ಜಾಲ್, ಜಯಂತ ನಗರ, ತವೀದ್ ಸಾಲ್ಮರ, ಮಹಮ್ಮದ್ ತಾರಿಗುಡ್ಡೆ, ಜುನೈದ್ Pಕೆರೆಮುಲೆ, ಸೂಪಿ ಬಪ್ಪಳಿಗೆ, ಮೋನು ಬಪ್ಪಳಿಗೆ, ಯಾಕೂಬ್ ಖಾನ್ ಸಾಹಿಬ್, ಜಯಂತಿ ಬಲ್ನಾಡು, ಹಮೀದ್ ಹಾಜಿ ಉಜಿರುಪಾದೆ, ಶರೀಫ್ ಬಲ್ನಾಡು, ರಝಾಕ್ ಬಪ್ಪಳಿಗೆ, ಹಮೀದ್ ಲವ್‌ಲಿ, ನೆಬಿಸಾ ಬಪ್ಪಳಿಗೆ, ಸುದಾ ಕುಂಜತ್ತಾಯ, ಜೆರಾಲ್ಡ್ , ಜೆ ಪಿ ರೋಡ್ರಿಗಸ್, ಅದ್ದು ಪಡೀಲ್, ಇಸ್ಮಾಯಿಲ್ ಎಂ ಡಿ ಬಲ್ನಾಡು, ವಿಲ್ಫ್ರೆಡ್ ಫೆರ್ನಾಂಡಿಸ್, ರೋಸ್ ಮೇರಿ, ದಿನೇಶ್ ಪಿ ವಿ, ವಿಜಯ ಭಂಡಾರಿ, ಪೂರ್ಣೇಶ್ ಭಂಡಾರಿ,ಅಶೋಕ್ ಪಾಯಿಸ್, ನ್ಯಾಯವಾದಿ ಎಂ ಪಿ ಅಬೂಬಕ್ಕರ್, ಮಹಮ್ಮದ್ ಶಾಫಿ ಹಾಜಿ, ಹಾಜಿ ರಝಾಕ್ ಶಾಫಿ, ಹಮೀದ್ ಸೋಂಪಾಡಿ, ಶಕೂರ್ ಹಾಜಿ, ವಿಶ್ವಜಿತ್ ಅಮ್ಮುಂಜೆ, ರಂಜಿತ್ ಬಂಗೇರ, ಮತ್ತಿತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement