ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಖಾಸಗಿ ಜೆಟ್ ವಿಮಾನ ಪತನಗೊಂಡಿದೆ.
ಕಲಬುರ್ಗಿಯಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ‘ರೆಡ್ ಬರ್ಡ್’ ಎಂಬ ಖಾಸಗಿ ಮಿನಿ ಜೆಟ್ ವಿಮಾನ ತಾಂತ್ರಿಕ ಕಾರಣಗಳಿಂದಾಗಿ ಹೊಲದ ಬಳಿ ಧರೆಗೆ ಉರುಳಿದೆ.
ಈ ದುರಂತದಲ್ಲಿ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ