Published
3 hours agoon
By
Akkare News
ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಶ್ರೀ ಗೋಪಾಲಕೃಷ್ಣ ಮಂದಿರ ವೇದಿಕೆಯಲ್ಲಿ ದಿನಾಂಕ 14/6/26 ರಂದು ಪೋಷಕರ ಸಭೆ ಹಾಗೂ ರಜತ ಪಲ್ಲವ -ವ್ಯಕ್ತಿತ್ವ ವಿಕಸನ ಇದರ ಉದ್ಘಾಟನಾ ಸಮಾರಂಭವು ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬಿರ,ಮುಖ್ಯ ಅತಿಥಿಯಾದ ಡಾ l ಮೋನಾ ಜಾಕ್ವೆಲಿನ್ ಮೆಂಡೋನ್ಸಾ ,ಮಂಗಳೂರು ಸೈoಟ್ ಅಲೋಷಿಯಸ್ (ಡೀಮ್ ಟು ಬಿ ಯೂನಿವರ್ಸಿಟಿ )ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ,ಶಾಲಾ ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯ,ಶ್ರೀ ಪ್ರಸನ್ನ ಎನ್ ಭಟ್ ಶಾಲಾ ಉಪಾಧ್ಯಕ್ಷರುಶ್ರೀ ಸುಬ್ರಾಯ ಬಿ ಎಸ್ ಜೊತೆ ಕಾರ್ಯದರ್ಶಿ,ನೂತನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದಶ್ರೀ ಸುರೇಶ್ ಪ್ರಭು ಎಸ್,ಶಾಲಾ ಸದಸ್ಯರಾದ ಶ್ರೀ ವೆಂಕಟಕೃಷ್ಣ ಕೆ ಕೆ ಹಾಗೂ ಡಾ l ಶಿವಾನಂದ ಎಚ್ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ.ಪೋಷಕರು ಹಾಗೂ ಶಿಕ್ಷಕ – ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.
ನಂತರ ಶಾಲಾ ಅಧ್ಯಕ್ಷರು ಫಲಕ ಅನಾವರಣ ಮಾಡುವ ಮೂಲಕ ಹಾಗೂ ತೆಂಗಿನ ಗಿಡಕ್ಕೆ ನೀರು ಎರೆಯುವ ಮೂಲಕ ‘ ರಜತ ಪಲ್ಲವ ‘ ಎಂಬ ಹೆಸರನ್ನು ಉದ್ಘಾಟನೆ ಮಾಡಲಾಯಿತು. ನಂತರ ಸಹ ಶಿಕ್ಷಕಿಯಾದ ಶ್ರೀಮತಿ ಮಹಾಲಕ್ಷ್ಮಿ ಯವರು ಮುಖ್ಯ ಅತಿಥಿಯ ಕಿರುಪರಿಚಯ ನೀಡಿದರು. ಮುಖ್ಯ ಅತಿಥಿಯಾದ ಡಾ l ಮೋನಾ ಜಾಕ್ವೆಲಿನ್ ಮೆಂಡೋನ್ಸಾರವರು ಮಾತನಾಡಿ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪೋಷಕರ ಸವಾಲುಗಳು ಏನು ಎಂಬುದು ಮುಖ್ಯವಾದುದು. ಈಗಿನ ಪರಿಸ್ಥಿತಿಯಲ್ಲಿ ಒಬ್ಬ ಮಗು ಮಾನಸಿಕವಾಗಿ, ದೈಹಿಕವಾಗಿ ಶಾಲೆಯಲ್ಲಿ ಹೆಚ್ಚಿನ ಅವಧಿ ಕಳೆಯುತ್ತದೆ . ಪುತ್ತೂರಿನ ಪರಿಸರದಲ್ಲಿ ಒಳ್ಳೆಯ ಶಾಲೆ ಈ ಸಾಂದೀಪನಿ. 25ನೇ ವರ್ಷದಲ್ಲಿ ಈ ಶಾಲೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಂತಹ ಉತ್ತಮ ಯೋಜನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 




