ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಶ್ರೀ ಕ್ಷೇತ್ರ ನಳೀಲು ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ : ಶ್ರೀ ವ್ಯಾಘ್ರಚಾಮುಂಡಿ,ರುದ್ರ ಚಾಮುಂಡಿ ದೈವಗಳ ಪುನಃ ಪ್ರತಿಷ್ಠೆ,ಆಶ್ಲೇಷಾ ಬಲಿ ಕಾರ್ಯಕ್ರಮ

Published

on

ಪುತ್ತೂರು :ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.21ರಂದು ಬೆಳಿಗ್ಗೆ ಉಷೆಪೂಜೆ,ಅಂಕುರ ಪೂಜೆ,ಮಹಾಗಣಪತಿ ಹೋಮ ಬೆಳಿಗ್ಗೆ 8.30ರಿಂದ 9.10ರ ಮೀನ ಲಗ್ನ ಮುಹೂರ್ತದಲ್ಲಿ ಶ್ರೀ ವ್ಯಾಘ್ರಚಾಮುಂಡಿ ,ರುದ್ರ ಚಾಮುಂಡಿ ದೈವಗಳ ಪುನಃ ಪ್ರತಿಷ್ಠೆ ಕಲಶಾಭಿಷೇಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಹಿರಿತನದಲ್ಲಿ ನಡೆಯಿತು.ಬಳಿಕ ತಂಬಿಲ,ಮಂಟಪ ಸಂಸ್ಕಾರ,ಅಗ್ನಿ ಜನನ,ಕುಂಭೇಶ ಕರ್ಕರಿ ಪೂಜೆ,ಬ್ರಹ್ಮ ಕಲಶ ಪೂಜೆ,ಪರಿಕಲಶ ಪೂಜೆ ನಡೆಯಿತು.




ಧರ್ಮರಸು ಭಜನಾ ಮಂಡಳಿ ಪಾಲ್ತಾಡಿ, ಚಾರ್ವಾಕ ಕಪಿಲೇಶ್ವರ ಮಹಿಳಾ ಭಜನಾ ಮಂಡಳಿ,ಬಿಳಿನೆಲೆ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ,ಸಂಜೆ ದೀಪಾರಾಧನೆ, ಅಧಿವಾಸ ಹೋಮ,ಕಲಶಾಧಿವಾಸ,ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಧೀಶಕ್ತಿ ಬಾಲಿಕಾ ಯಕ್ಷ ಬಳಗದವರಿಂದ ತಾಳಮದ್ದಳೆ ,ಪಾಲ್ತಾಡಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ ಕಲಾಮಂದಿರ್ ಬೆಳ್ಳಾರೆ ಇವರಿಂದ ನೃತ್ಯ ಸಂಭ್ರಮ ,ರಾತ್ರಿ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಅಮ್ಮೆರ್ ನಾಟಕ ನಡೆಯಿತು.ಇಂದು ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ ಬೆಳಿಗ್ಗೆ ಮಹಾಗಣಪತಿ ಹೋಮ, ಗಂಟೆ ೭.೪೮ ರಿಂದ ೮.೩೨ ವರೆಗೆ ನಡೆಯುವ ಮೀನಲಗ್ನ ಸುಮೂಹರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಶ್ರೀ ಭೂತ ಬಲಿ, ,ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ನಡೆಯಲಿದೆ.






ಇದೇ ವೇಳೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಮತ್ತು ಬೆಳಂದೂರು ವಿಷ್ಣು ಪ್ರಿಯ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ಸೇವೆ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಗುರುಕುಲ ಕಲಾ ಕೇಂದ್ರ ಪುರುಷರಕಟ್ಟೆ ಇವರಿಂದ ನೃತ್ಯ ಗಾನ ಸಂಭ್ರಮ ಹಾಗೂ ಸಂಜೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ಕಲ್ಯಾಣತ್ರಯ ನಡೆಯಲಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement