Published
10 months agoon
By
Akkare Newsಮಂಗಳೂರು : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಮತ್ತು ಪ್ರತ್ಯೇಕವಾಗಿ ರಮಳಾನ್ ತಿಂಗಳಲ್ಲಿ ಅಗತ್ಯ ಭದ್ರತಾ ಕಲ್ಪಿಸಬೇಕು, ಶಾಂತಿ ಕಾಪಾಡುವಂತೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾದ ಸಿ.ಅಬ್ದುರ್ರಹ್ಮಾನ್ ಮಂಗಳೂರು, ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ , ಕೋಶಾಧಿಕಾರಿ ರಿಯಾಝ್ ಹರೇಕಳ, ಉಪಾಧ್ಯಕ್ಷರಾದ ಎಚ್.ಇಸ್ಮಾಯಿಲ್ ಬಂದರ್, ಪಿ.ಕೆ ಸಯ್ಯಿದ್ ಬಂಗೇರುಕಟ್ಟೆ ಹಾಗೂ ಸದಸ್ಯರಾದ ಎ.ಎಸ್.ಇ ಕರೀಮ್ ಕಡಬ, ಕೆ ಸಿ ಖಾದರ್ ಕಾವೂರು ಮತ್ತಿತರರು ಉಪಸ್ಥಿತರಿದ್ದರು.