Published
10 months agoon
By
Akkare Newsಬೆಂಗಳೂರು: ವಿದ್ಯುತ್ ಬಳಕೆದಾರರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸಿಹಿ ಸುದ್ದಿ ನೀಡಿದೆ. ಪ್ರತಿ ಯೂನಿಟ್‌ಗೆ 1ರೂ. 10 ಪೈಸೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ,ಈ ದರ ಇಳಿಕೆ 100 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡುವ ಗ್ರಾಹಕರಿಗೆ ಮಾತ್ರ ಅನ್ವಯ ಆಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಈ ದರ ಇಳಿಕೆಯ ಆದೇಶ ಮಾ.1ರಿಂದಲೇ ಅನ್ವಯ ಆಗುತ್ತದೆ. ವಾಣಿಜ್ಯ, ಕೈಗಾರಿಕಾ ಮತ್ತು ಸ್ಥಳೀಯ ವಸತಿ ಉದ್ದೇಶದ ಮನೆಗಳ ಗ್ರಾಹಕರಿಗೆ ವಿದ್ಯುತ್ ದರ ಇಳಿಕೆಯ ಆದೇಶವು ಅನ್ವಯವಾಗುತ್ತದೆ. ಇಲ್ಲಿ ಮುಖ್ಯವಾಗಿ ಪ್ರತಿ ತಿಂಗಳಿಗೆ 100 ಯೂನಿಟ್‌ಗಳಿಗಿಂತ ಹೆಚ್ಚಿನ ವಿದ್ಯುತ್ ಉಪಯೋಗಿಸುವವರಿಗೆ ಹೊಸ ದರ ಇಳಿಕೆಯು ಅನ್ವಯ ಆಗುತ್ತದೆ. 5 ಎಸ್ಕಾಂ ಗಳು ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದವು.
💡ಗೃಹ ಬಳಕೆ ಸಂಪರ್ಕ: 100 ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಗಾಗಿ ಪ್ರತಿ ಯೂನಿಟ್‌ಗೆ 1 ರೂ. 10 ಪೈಸೆ ವಿದ್ಯುತ್ ಶುಲ್ಕವನ್ನು ಕಡಿತ
💡ವಾಣಿಜ್ಯ ಸಂಪರ್ಕ: ಪ್ರತಿ ಯೂನಿಟ್‌ಗೆ 125 ಪೈಸೆ (1 ರೂ.25 ಪೈಸೆ) ಕಡಿಮೆ ಮಾಡಲಾಗಿದೆ. ಅಂದರೆ ಪ್ರತಿ ಕಿಲೋವೋಲ್ಟ್ ಆಂಪಿಯರ್ (ಕೆವಿಎ)ಗೆ ರೂ.10 ಕಡಿಮೆ
💡ಕೈಗಾರಿಕೆ ಸಂಪರ್ಕ: ಪ್ರತಿ ಯೂನಿಟ್‌ಗೆ 50 ಪೈಸೆಗಳಷ್ಟು ಕಡಿಮೆ ಮಾಡಲಾಗಿದೆ. ಪ್ರತಿ ಕೆವಿಎಗೆ ರೂ.10 ಕಡಿಮೆ
💡ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು : ಪ್ರತಿ ಯೂನಿಟ್‌ಗೆ 40 ಪೈಸೆ ಕಡಿಮೆ ಮಾಡಲಾಗಿದೆ. ಪ್ರತಿ ಕೆವಿಎಗೆ ರೂ.10 ಕಡಿಮೆ
💡ಖಾಸಗಿ ಏತ ನೀರಾವರಿ: ಪ್ರತಿ ಯೂನಿಟ್‌ಗೆ 200 ಪೈಸೆ (2 ರೂ.) ವಿದ್ಯುತ್ ದರ ಕಡಿತ
💡ಹಾಪಾರ್ಟ್‌ಮೆಂಟ್: ಪ್ರತಿ ಪ್ರತಿ ಕಿಲೋವೋಲ್ಟ್ ಆಂಪಿಯರ್ (ಕೆವಿಎ)ಗೆ ರೂ.10 ಕಡಿಮೆಯಾಗುತ್ತದೆ
💡ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು: ಪ್ರತಿ ಯೂನಿಟ್‌ಗೆ 50 ಪೈಸೆ ಕಡಿತ ಮಾಡಲಾಗುತ್ತದೆ
💡ಕೈಗಾರಿಕಾ ಸಂಸ್ಥೆಗಳು: ಪ್ರತಿ ಯೂನಿಟ್‌ಗೆ 100 ಪೈಗಳಷ್ಟು ದರ ಕಡಿಮೆ