Published
9 months agoon
By
Akkare Newsಕಡಬ: ತಾಲೂಕಿನ ಕುದ್ಮಾರು ಗ್ರಾಮದ ಈರ್ವೆರ್ ಉಳ್ಳಾಕುಲು, ಕೆಡೆಂಜೋಡಿತ್ತಾಯ, ವ್ಯಾಘ್ರ ಚಾಮುಂಡಿ ಮತ್ತು ಕುಟುಂಬ ಸಂಬಂಧಪಟ್ಟ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ಏ.24 ರಿಂದ ಮೇ 2 ರ ತನಕ ನಡೆಯುವ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ ಹಾಗೂ ಶ್ರೀ ಮದ್ಭಾಗವತ ಸಪ್ತಾಹದ ಆಮಂತ್ರಣದೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ್ ಭಟ್ ಕೊಯಕ್ಕುಡೆ, ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,
ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಕೆಡೆಂಜಿಗುತ್ತು ದಿನೇಶ್ ಕುಮಾರ್, ಕೆಡೆಂಜಿಗುತ್ತು ಶಕುಂತಳಾ ಗೋಪಾಲ್ ಪೂಜಾರಿ, ಕೆಡೆಂಜಿಗುತ್ತು ಜಯಂತಿ, ಕೆಡೆಂಜಿಗುತ್ತು ದಿನಮಣಿ ನಿತಿನ್ ಚಂದ್ರ, ಕೆಡೆಂಜಿಗುತ್ತು ವಸುಧಾ ಶಶಿಧರ್ ಹಾಗೂ ಕುಟುಂಬಸ್ಥರು, ಊರವರು ಉಪಸ್ಥಿತರಿದ್ದರು.