ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ವಿವಿಧತೆಯಲ್ಲಿ ಏಕತೆ ಸಾರುವ ತುಳು ಭಾಷೆ – ತುಳುವೆರೆ ಕರ್ಣೆ ಕನ್ಯಾನ ಸದಾಶಿವ ಶೆಟ್ಟಿ

Published

on

 

 

ಮಂಗಳೂರು : ತುಳು ಭಾಷೆಯಲ್ಲಿ ವಿವಿಧ ತರವಾದ ಪ್ರಾದೇಶಿಕ ಬದಲಾವಣೆಗಳಿಗೆ ಅಲ್ಲದೆ ಜಾತಿಯ ಬದಲಾವಣೆಗಳಿವೆ ಇದೆಲ್ಲವೂ ತುಳುನಾಡಿನ ತುಳು ಭಾಷೆಯ ವಿಶಿಷ್ಟತೆಯನ್ನು ಸಾರುತ್ತದೆ. ನನ್ನ ಈ ದಾನ ಧರ್ಮದ ಕೆಲಸದಲ್ಲಿ ನನ್ನ ಮನೆಯವರ ಶ್ರೇಷ್ಠ ಮನಸ್ಥಿಯೇ ಕಾರಣ. ನನ್ನಲ್ಲಿ ನನ್ನ ಧರ್ಮಪತ್ನಿ ಮಕ್ಕಳು ಯಾವುದೇ ಪ್ರೀತಿಯ ಆಕ್ಷೇಪಗಳನ್ನು ನೀಡದಿರುವುದೇ ಈ ರೀತಿಯ ಕೆಲಸ ಕಾರ್ಯಗಳ ಪ್ರೋತ್ಸಾಹ ಎಂದು ತುಳುವೆರೆ ಕರ್ಣೆ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.

ಅವರು ಮಂಗಳೂರು ಪುರ ಭವನದಲ್ಲಿ ನಡೆದ ತುಳುವೆರೆ ಆಯನೊ ಕೂಟ ಕುಡ್ಲ ಇದರ ಪದಗ್ರಹಣ ಸಮಾರಂಭದಲ್ಲಿ ತುಳುವೆರೆ ಕರ್ಣೆ ಬಿರುದು ಸ್ವೀಕರಿಸಿ ಮಾತನಾಡಿದರು.

 

ಕಾರ್ಯಕ್ರಮವನ್ನು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಹರಿನಾರಾಯಣ ಅಸ್ರಣ್ಣರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕರ್ನಾಟಕ ಮಾಜಿ ಸಚಿವರಾದ ರಮನಾಥ ರೈ, ವಿಶ್ವ ಬಂಟರ ಕೂಟಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ, ನ್ಯಾಯವಾದಿ, ನೋಟರಿ ಪದ್ಮರಾಜ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ ಭಂಡಾರಿ, ದಯಾನಂದ ಕತ್ತಲಸಾರ್, ಯೋಗೀಶ್ ಶೆಟ್ಟಿ ಜಪ್ಪು, ಪ್ರವೀಣ್ ಕುಮಾರ್ ಕೋಡಿಯಾಲ್ ಬೈಲ್ ಮೊದಲಾದವರು ಉಪಸ್ಥಿತರಿದ್ದರು. ಖ್ಯಾತ ಸಂಗೀತ ನಿರ್ದೇಶಕ ಪ್ರಮೋದ ಸಪ್ರೆ ಮತ್ತು ಬಳಗದವರು ತುಳುನಾಡ ಗೀತೆ ಹಾಡಿದರು. ನವೀನ್ ಶೆಟ್ಟಿ ಎಡ್ಮೇಮಾರುರವರು ಕಾರ್ಯಕ್ರಮ ನಿರೂಪಿಸಿದರು.

 

ಪದಗ್ರಹಣ ಸಮಾರಂಭದಲ್ಲಿ ಗೌರವಾಧ್ಯಕ್ಷರಾಗಿ ಮನೋಹರ್ ಶೆಟ್ಟಿ ಸಾಯಿ ರಾಧ ಗ್ರೂಪ್ ಆಡಳಿತ ನಿರ್ದೇಶಕ, ಅಧ್ಯಕ್ಷರಾಗಿ ಶಮೀನಾ ಆಳ್ವ, ಕಾರ್ಯದರ್ಶಿಯಾಗಿ ರಾಜೇಶ್ ಹೆಗ್ಡೆ ಪೊಳಲಿ, ಉಪಾಧ್ಯಕ್ಷರಾಗಿ ಗೋಪಾಡ್ಕರ್,ಆಶಾ ಶೆಟ್ಟಿ ಅತ್ತಾವರ, ಯಾದವ್ ಕೋಟ್ಯಾನ್ ಸಹಿತ ಎಲ್ಲಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಡಾ. ರಾಜೇಶ್ ಆಳ್ವ ಪ್ರಮಾಣ ವಚನ ಬೋಧಿಸಿದರು.

 

ಅಗರಿ ಶ್ರೀನಿವಾಸ ಭಾಗವತರು ಬರೆದ, ದೇವದಾಸ್ ಈಶ್ವರಮಂಗಲ ತುಳುವಿಗೆ ಅನುವಾದಿಸಿ, ಸರಪಾಡಿ ಅಶೋಕ್ ಶೆಟ್ಟಿ ಸಂಪಾದಿಸಿದ, ಐಲೇಸಾ ಬೆಂಗಳೂರು ಮತ್ತು ಟೋಟಲ್ ಕನ್ನಡ ಇವರು ಪುಸ್ತಕ ಪ್ರಕಾಶನ ಮಾಡಿದ ಸಿರಿ ದೇವಿ ಮಾತ್ಮೆ ಯಕ್ಷಗಾನ ಪ್ರಸಂಗ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಮುನ್ನುಡಿಯಾಗಿ ವಾಯ್ಸ್ ಆಫ್ ಆರಾಧನಾ ಕೂಟದ ಮಕ್ಕಳಿಂದ ಜೋಕ್ಲೆ ಮಿನದನ ಕಾರ್ಯಕ್ರಮ ರಂಗೇರಿತು,

 

ಮಂಗಳೂರು ಪುರಭವನದಲ್ಲಿ ಪ್ರಪ್ರಥಮ ಬಾರಿಗೆ ತುಳು ಭಾಷೆಯಲ್ಲಿ ಭಾಗವತಿಕೆ ಸಹಿತ ತುಳು ದೇವಿ ಮಹಾತ್ಮೆ ಯಕ್ಷಗಾನವನ್ನು ರಾಜ್ಯ ಪ್ರಶಸ್ತಿ ವಿಜೇತ ಸರಪಾಡಿ ಅಶೋಕ್ ಶೆಟ್ಟಿ ಸಂಯೋಜನೆಯಲ್ಲಿ ಸುಮಾರು 40 ಮಂದಿ ತೆಂಕುತಿನ ಹೆಮ್ಮೆಯ ಕಲಾವಿದರ ಕೂಡುವಿಕೆಯಿಂದ ಕಾರ್ಯಕ್ರಮ ಸಂಪನ್ನಗೊಂಡಿತು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version