ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ: ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧ ದೂರು ದಾಖಲು

Published

on

ಪುತ್ತೂರು : ಗಲಾಟೆ ಹಿನ್ನೆಲೆ ಶಿವಮೊಗ್ಗಕ್ಕೆ ಭೇಟಿ ನೀಡಿದ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಹೊರಿಸಿ ಹಿಂದೂ ಫಯರ್‌ ಬ್ರ್ಯಾಂಡ್‌ ಲೀಡರ್‌ ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧ ದೂರು ದಾಖಲಿಸಲಾಗಿದೆ.ನಿನ್ನೆ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿದ್ದ ಅರುಣ್​ಕುಮಾರ್ ಪುತ್ತಿಲ, ನಿಷೇಧಾಜ್ಞೆ ನಡುವೆ ಪ್ರಚೋದನಕಾರಿ‌ ಹೇಳಿಕೆ ನೀಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ಸಂದರ್ಭ ಹೀಂದೂಗಳನ್ನು ಗುರಿಮಾಡಿಕೊಂಡು ಹಿಂಸಾಚಾರ ಎಸಗಲಾಗಿದ್ದು, ಹಿಂದುಗಳ ಮನೆಗೆ ಕಲ್ಲೆಸೆದು ಬೆದರಿಕೆಯೊಡ್ಡಲಾಗಿದೆ. ಮೆರವಣಿಗೆಯಲ್ಲಿ ತಲವಾರು ಪ್ರದರ್ಶಿಸಿ ಹಿಂದೂಗಳನ್ನು ಬೆದರಿಸಲಾಗಿದ್ದು, ಔರಂಗಜೇಬ್‌, ಟಿಪ್ಪು ಸುಲ್ತಾನ್‌ ಮತ್ತಿತರರ ಕಟೌಟ್‌ ಅಳವಡಿಸಿ ಮತೀಯ ಸಾಮರಸ್ಯ ಕದಡಲು ಯತ್ನಿಸಲಾಗಿದೆ. ಈ ಘಟನೆ ಬಳಿಕ ಹಲವು ಹಿಂದು ನಾಯಕರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version