ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ,ಹುಲಿ ಉಗುರು ಖ್ಯಾತಿಯ, ವರ್ತೂರು ಸಂತೋಷ್ ಗೆ ಬಿಗ್ ರಿಲೀಫ್-ಜಾಮಿನು ಮಂಜೂರು

Published

on

 

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಎಂಬ ಕಾರಣಕ್ಕೆ ಅರೆಸ್ಟ್​ ಆಗಿದ್ದ ಬಿಗ್​ಬಾಸ್ ಸೀಸನ್​ 10 ಸ್ಪರ್ಧಿ ವರ್ತೂರು ಸಂತೋಷ್​ಗೆ ಜಾಮೀನು ದೊರೆತಿದೆ. ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದ್ದು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹುಲಿಯ ಉಗುರಿನ ಪೆಂಡೆಂಟ್​​ ಧರಿಸಿದ್ದಾನೆ ಎಂಬ ಕಾರಣಕ್ಕೆ ಅರಣ್ಯಾಧಿಕಾರಿಗಳು ಬಿಗ್​ ಬಾಸ್​ ಸ್ಪರ್ಧೆಯಿಂದಲೇ ವರ್ತೂರು ಸಂತೋಷ್​ರನ್ನ ಅರೆಸ್ಟ್​ ಮಾಡಿದ್ದರು. ನವೆಂಬರ್​ 6 ವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

 

ಇದೇ ವಿಚಾರವಾಗಿ ಬೆಂಗಳೂರಿನ ಎಸಿಜೆಎಂ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೀಗ ಸಂತೋಷ್​ಗೆ ಜಾಮೀನು​ ಸಿಕ್ಕಿದೆ. ಇಂದು ಸಂಜೆ ವರ್ತೂರು ರಲೀಸ್​ ಆಗುವ ಸಾಧ್ಯತೆ ಇದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version