ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪುರುಷರ ಕಟ್ಟೆ:ಆತ್ರೆಯ ಮಲ್ಟಿ ಸ್ಪೆಷಲಿಸ್ಟ್ ಕ್ಲಿನಿಕ್ ನಲ್ಲಿ ಬೃಹತ್ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ

Published

on

ಪುತ್ತೂರು:ಪುರುಷರಕಟ್ಟೆಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಅ.29ರಂದು ನರಿಮೊಗ್ರು ಗ್ರಾ.ಪಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನರಿಮೊಗರು, ಓಂ ಫ್ರೆಂಡ್ಸ್ ಮುಕ್ವೆ, ಆಟೋರಿಕ್ಷಾ ಚಾಲಕ ಮ್ಹಾಲಕ ಸಂಘ ಮುಕ್ವೆ, ಬೆದ್ರಾಳ ನಂದಿಕೇಶ್ವರ ಭಜನಾ ಮಂಡಳಿ, ಪುರುಷರಕಟ್ಟೆ ಪೂರ್ಣಾನಂದ ಭಜನಾ ಮಂದಿರ, ಶಾಂತಿಗೋಡು ವಿಕ್ರಂ ಯುವಕ ಮಂಡಲ, ನರಿಮೊಗರು ಸೇರಾಜೆ ಶ್ರೀಶಾರದಾಂಬಾ ಭಜನಾ ಮಂಡಳಿ, ವನದುರ್ಗಾಂಬಿಕಾ ಭಜನ ಮಂಡಳಿ ದೇವಿನಗರ, ಸಾಂದೀಪನಿ ಗ್ರಾಮಿಣ ವಿದ್ಯಾಸಂಸ್ಥೆಗಳು ನರಿಮೊಗರು, ಸರಸ್ವತಿ ವಿದ್ಯಾ ಸಂಸ್ಥೆ ಪುರುಷರಕಟ್ಟೆ ಮತ್ತು ಎಸ್‌ಎಸ್‌ಎಫ್ ಮುಕ್ವೆ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ವೈದ್ಯಕೀಯ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅ.29ರಂದು ನಡೆಯಿತು.

ಶಿಬಿರವನ್ನು ದೀಪ ಬೆಳಿಗಿಸಿ ಉದ್ಘಾಟಿಸಿದ ಪುತ್ತೂರಿನ ಖ್ಯಾತ ವೈದ್ಯರು, ಡಾಕ್ಟರ‍್ಸ್ ಫಾರಂನ ಅಧ್ಯಕ್ಷ ಡಾ..ಸುರೇಶ್ ಪುತ್ತೂರಾಯ ಮಾತನಾಡಿ, ಆದುನಿಕ ದಿನಗಳಲ್ಲಿ ಸಮಸ್ಯೆ ಬಂದಾಗ ಮಾತ್ರ ವೈದ್ಯರ ಬಳಿಗೆ ಹೋಗುವುದು ಸಾಮಾನ್ಯವಾಗಿದೆ. ಕೆಲವು ಕಾಯಿಲೆಗಳಿಗೆ ರಕ್ತದ ಒತ್ತಡ, ಡಯಾಬಿಟಿಸ್ ಮೂಲ ಕಾರಣವಾಗಿದೆ. ಸಮಸ್ಯೆ ಬಂದಾಗ ಅದರ ಅರಿವಾಗುವುದು. ಹೀಗಾಗಿ ಆಗಾಗ ಪರೀಕ್ಷಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಉಚಿತ ಶಿಬಿರಗಳಲ್ಲಿ ಉಚಿತ ಸೇವೆ ನೀಡಲಾಗುತ್ತಿದ್ದು ಆರೋಗ್ಯದ ಸಮಸ್ಯೆಗಳನ್ನು ಪತ್ತೆ, ಸಾಮಾನ್ಯ ಕಾಯಲೆಗಳನ್ನು ಪತ್ತೆ ಮಾಡಲು ಅನುಕೂಲವಾಗಲಿದೆ. ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಉಚಿತ ಸೇವೆ ನೀಡಲಾಗುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ವಿವಿಧ ವಿಭಾಗಗಳ ವೈದ್ಯರ ಮೂಲಕ ಗ್ರಾಮೀಣ ಜನತೆಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.

 

ಅಧ್ಯಕ್ಷತೆ ವಹಿಸಿದ್ದ ಕೆಮ್ಮಿಂಜೆ ನಾಗೇಶ ತಂತ್ರಿ ಮಾತನಾಡಿ, ಜನರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಶಿಬಿರವು ಅನುಕೂಲಕರವಾಗಲಿದೆ. ನೂತನವಾಗಿ ಪ್ರಾರಂಭಗೊಂಡು ಕ್ಲಿನಿಕ್‌ನಲ್ಲಿ ಶಿಬಿರ ಆಯೋಜಿಸಿಕೊಂಡಿದ್ದು ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಲ್ಲಿನ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಯಾಗಲಿ ಎಂದು ಹೇಳಿದರು.

 

 

ಡಾ.ಶ್ರೀ ಕುಮಾರ್ ಕತ್ರಿಬೈಲು ಮಾತನಾಡಿ, ವೈದ್ಯಕೀಯ ಶಿಬಿರದ ಮೂಲಕ ಜನರಿಗೆ ಪರೀಕ್ಷಿಸಿ ಕಾಯಿಲೆ ಪತ್ತೆ ಮಾಡುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗಲಿದೆ. ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಉಚಿತ ವೈದ್ಯಕೀಯ ಶಿಬಿರವು ಸಮಾಜಮುಖಿ ಕಾರ್ಯಕ್ರಮವಾಗಿದೆ ಎಂದರು.

ಡಾ.ಅನನ್ಯ ಲಕ್ಷ್ಮೀ ಸಂದೀಪ್ ಮಾತನಾಡಿ, ಉಚಿತ ವೈದ್ಯಕೀಯ ಶಿಬರವನ್ನು ಆಯೋಜಿಸುವ ಮೂಲಕ ನಮಗೂ ಆರೋಗ್ಯ ಸೇವೆ ನೀಡಲು ಅವಕಾಶ ದೊರೆತಿದೆ. ಇಲ್ಲಿನ ಸೇವೆಯು ಎಲ್ಲಾ ಕಡೆ ವಿಸ್ತಾರಗೊಂಡು ಲಕ್ಷಾಂತರ ಮಂದಿ ಸೇವೆ ಪಡೆಯುವಂತಾಗಬೇಕು. ಜನತರು ಉದಾಸೀನತೆ ಬಿಟ್ಟು ಕಾಯಿಲೆ ತಡೆಗಟ್ಟಲು ಪ್ರಯತ್ನಿಸಬೇಕು. ಕಾಯಿಲೆಗಳಿಂದ ದೂರವಿರಲು ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

 

 

ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಇಂದಿರಾನಗರ ಮಾತನಾಡಿ, ಪ್ರತಿ ತಿಂಗಳು ಶಿಬಿರ ಮಾಡುವುದಾದರೂ ಪಂಚಾಯತ್‌ನಿಂದ ಸಹಕಾರ ನೀಡಲಾಗುವುದು.

ವೇದನಾಥ ಸುವರ್ಣ ಮಾತನಾಡಿ, ಪ್ರತಿಷ್ಠಿತ ಮನೆ ಮತನದಿಂದ ಬಂದಿರುವ ಡಾ.ಸುಜಯ್ ತಂತ್ರಿಯವರು ಪ್ರಾರಂಭಿಸಿರುವ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಉಚಿತ ಶಿಬಿರದ ಮೂಲಕ ಉತ್ತಮ ಜನರ ಸೇವೆ ನೀಡುತ್ತಿದೆ ಎಂದರು.

 

 

ಚೀಫ್ ಕನ್ಸಲ್ಟೆಂಟ್ ಹಾಗೂ ಫಿಸಿಷಿಯನ್ ಆಗಿರುವ ಡಾ.ಸುಜಯ್ ತಂತ್ರಿ ಕೆಮ್ಮಿಂಜೆ ಮಾತನಾಡಿ, ಪುರುಷರಕಟ್ಟೆ ಭಾಗದ ಜನರ ಆರೋಗ್ಯ ರಕ್ಷಣೆಗಾಗಿ ಮಲ್ಟಿ ಸ್ಪೆಷಾಲಟಿ ಕ್ಲಿನಿಕ್ ಪ್ರಾರಂಭಿಸಬೇಕು ಎನ್ನು ಹಲವು ವರ್ಷಗಳ ಕನಸು ನನಸಾಗಿದೆ. ನಮ್ಮ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಫಿಸಿಯೋಥೆರಫಿ, ಲ್ಯಾಬೋರೇಟರಿ, ಕ್ಲಿನಿಕ್ ಹಾಗೂ ಔಷಧಿಗಳು ಒಂದೇ ಕಡೆ ದೊರೆಯಲಿದೆ. ಕ್ಲಿನಿಕ್‌ನಲ್ಲಿ ಸುಸಜ್ಜಿತ ಆಧುನಿಕ ಕಂಪ್ಯೂಟರಿಕೃತ ಲ್ಯಾಬೋರೇಟರಿ ಹೊಂದಿದ್ದು ಎಲ್ಲಾ ರೀತಿಯ ರಕ್ತ ಪರೀಕ್ಷೆ, ಮಲ, ಮೂತ್ರ, ಕಫ ಪರೀಕ್ಷೆಗಳನ್ನು ನಡೆಸಲಾಗುವುದು. ಪೈನ್ ಮ್ಯಾನೇಜ್‌ಮೆಂಟ್ ಯೂನಿಟ್, ಫಿಸಿಯೋಥೆರಫಿ ಮತ್ತು ರೆಹಬಿಲಿಟೇಷನ್, ಕಪ್ಪಿಂಗ್ ಥೆರಫಿ, ಕೈರೋಪ್ರಾಖ್ಟಿಕ್ ಥೆರಫಿಗಳನ್ನು ನಡೆಸಲಾಗುವುದು. ವಿಶೇಷವಾಗಿ ವಿವಿಧ ಹೆಲ್ತ್ ಪ್ಯಾಕೇಜ್ ಮೂಲಕ ತಪಾಸಣೆ, ತಜ್ಷರ ಸಲಹೆಗಳನ್ನು ಪಡೆದು ಸಂಶಯ ನಿವಾರಣೆಗೆ ಅನುಕೂಲಕರವಾಗಲಿದೆ.

 

 

ಮಕ್ಕಳ ತಜ್ಞ ಡಾ. ಸಂದೀಪ್ ಎಚ್.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಸುಜಯ್ ತಂತ್ರಿ ಸ್ವಾಗತಿಸಿ, ಮಾನಸ ಸುಜಯ ತಂತ್ರಿ ವಂದಿಸಿದರು. ಡಾ.ಅಕ್ಷತಾ ಹಾಗೂ ವೆಂಕಟಕೃಷ್ಣ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.

ಚೀಫ್ ಕನ್ಸಲ್ಟೆಂಟ್ ಮತ್ತು ಫಿಸಿಷಿಯನ್ ಆಗಿರುವ ಡಾ.ಸುಜಯ್ ತಂತ್ರಿ ಕೆಮ್ಮಿಂಜೆ, ಮಕ್ಕಳ ತಜ್ಞ ಡಾ. ಸಂದೀಪ್ ಎಚ್.ಎಸ್., ಹಿರಿಯ ತಜ್ಞ ವೈದ್ಯ ಡಾ.ಶ್ರೀಕುಮಾರ್ ಕತ್ರಿಬೈಲ್, ಫಿಸಿಷಿಯನ್ ಮತ್ತು ಮಧುಮೇಹ ತಜ್ಞೆ ಡಾ.ಅನನ್ಯಲಕ್ಷ್ಮೀ ಸಂದೀಪ್, ಎಲುಬು ಮತ್ತು ಕೀಲು ತಜ್ಞ ಡಾ.ಸಚಿನ್ ಶಂಕರ್ ಹಾರಕರೆ, ಮನೋರೋಗ ಮತ್ತು ಕೌನ್ಸಿಲಿಂಗ್ ತಜ್ಞೆ ಡಾ.ಅಕ್ಷತಾ ಸಿ.ಜೆ, ಡಾ.ಗ್ರೀಷ್ಮಾ ಕೆ. ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿಕೊಟ್ಟರು. ಮಧುಮೇಹ ತಪಾಸಣೆ, ರಕ್ತದ ಒತ್ತಡ, ಇಸಿಜಿ ಮೊದಲಾದ ಚಿಕಿತ್ಸೆ ಹಾಗೂ ತಪಾಸಣೆ, ಸಾಮಾನ್ಯ ಚಿಕಿತ್ಸೆ ಹಾಗೂ ಸಲಹೆಗಳನ್ನು ಸಾರ್ವಜನಿಕರು ಪಡೆದುಕೊಂಡರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version