ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುವ A.O. ಫೆಲೋಶಿಪ್ ಇನ್ polytraumaಕ್ಕೆ ಭಾರತದಿಂದ ಪುತ್ತೂರಿನ ಖ್ಯಾತ ಎಲುಬು ತಜ್ಞ ಡಾ. ಸಚಿನ್ ಶಂಕರ್ ಅವರ ಪತ್ನಿ ನಾಗಶ್ರೀ ಎಸ್. ಶಂಕರ್ ಆಯ್ಕೆ

Published

on

 

ಪುತ್ತೂರು: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುವ A.O. ಫೆಲೋಶಿಪ್ ಇನ್ polytraumaಕ್ಕೆ ಭಾರತದಿಂದ ನಾಗಶ್ರೀ ಎಸ್ ಶಂಕರ್ ಆಯ್ಕೆಯಾಗಿದ್ದಾರೆ. ನಾಗಶ್ರೀ ಸೇರಿ ಭಾರತದಿಂದ ಇಬ್ಬರು ಮಾತ್ರ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ. ಇವರು 30ಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಆರ್ಟಿಕಲ್ ಪ್ರಕಟಿಸಿದ್ದಾರೆ. ತನ್ನ 29ನೇ ವಯಸ್ಸಿನಲ್ಲಿ 30ಕ್ಕಿಂತಲೂ ಹೆಚ್ಚು ಅಂತರಾಷ್ಟ್ರೀಯ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಆರ್ಟಿಕಲ್ ಪಬ್ಲಿಕೇಶನ್ ಮಾಡಿ ಸಾಧನೆಗೈದಿರುವ ಪ್ರಥಮ ಭಾರತೀಯ ಮಹಿಳೆ ಇವರಾಗಿದ್ದಾರೆ. ಇವರು MBBS ಪದವಿಯನ್ನು MS ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ, MS ಆರ್ಥೋ ವಿಜಯವಾಡ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ (Acute care Surgery & Polytrauma) ಪ್ರತಿಷ್ಠಿತ ಗಂಗಾ ಆಸ್ಪತ್ರೆ ಕೊಯಂಬುತ್ತೂರಿನಲ್ಲಿ ಪೂರೈಸಿದ್ದಾರೆ. ಈಗ ಸ್ವಿಟ್ಜರ್‌ಲ್ಯಾಂಡ್ ಯೂನಿವರ್ಸಿಟಿಯಲ್ಲಿ ಪ್ರಪಂಚದ ನಂಬರ್ ಒನ್ Polytrauma ಸರ್ಜನ್ ಡಾ. ಪ್ಯಾಪೆಯವರೊಂದಿಗೆ ೨ ತಿಂಗಳ ಉನ್ನತ ಪರಿಣತಿಗಾಗಿ ತೆರಳಿದ್ದಾರೆ. ಇವರು ಮಹಾವೀರ ಆಸ್ಪತ್ರೆ ಮತ್ತು ಪುತ್ತೂರು ಪಾಲಿಕ್ಲಿನಿಕ್‌ನಲ್ಲಿ ಆರ್ಥೋಪೆಡಿಕ್ ಸರ್ಜನ್ ಆಗಿರುವ ಡಾ. ಸಚಿನ್‌ ಶಂಕರ್‌ರವರ ಪತ್ನಿ, ಹಾರಕರೆ ವೆಂಕಟ್ರಮಣ ಭಟ್ ಮತ್ತು ಪ್ರೇಮಾ ವಿ. ಭಟ್ ದಂಪತಿಯ ಸೊಸೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version