ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಉಡುಪಿ

ಉಡುಪಿ: ಸಹದ್ಯೋಗಿಯಿಂದಲೇ ಕೊಲೆಯಾದ ಗಗನಸಕಿ, ಏಕಮುಖಿ ಪ್ರೀತಿ ಅಥವಾ ದ್ವೇಷ ಕೊಲೆಗೆ ಮುಳುವಾಯಿತೆ !?

Published

on

ಉಡುಪಿ : ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧಿಸಿ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಪೊಲೀಸರು ಬಂಧಿಸಿದ್ದಾರೆ.

 

ಬೆಳಗಾವಿಯ ಕುಡಚಿಯ ಸಂಬಂಧಿಕರ ಮನೆಯಲ್ಲಿ ಪ್ರವೀಣ್ ಅರುಣ್ ಚೌಗಲೆಯನ್ನು ತಲೆಮರೆಸಿಕೊಂಡಿದ್ದನು. ಆತನ ಮೊಬೈಲ್​ ಸ್ವಿಚ್​ ಆನ್​ ಆದಂತೆ ಎಚ್ಚೆತ್ತುಕೊಂಡ ಪೊಲೀಸರು ಕೂಡಲೇ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನ ಪೊಲೀಸರು ಮಧ್ಯಾಹ್ನದ ವೇಳೆಗೆ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

 

ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಹಾಜರು ಹಿನ್ನೆಲೆ ನ್ಯಾಯಾಲಯದ ಬಳಿ ಹೆಚ್ಚಿನ ಪೊಲೀಸ್ ಭದ್ರತೆಗೆ ಸಿದ್ಧತೆ ಮಾಡಲಾಗಿದೆ. ಉಡುಪಿ ಡಿವೈಎಸ್ ಪಿ ದಿನಕರ ನೇತೃತ್ವದ ತಂಡ ನ್ಯಾಯಾಲಯದ ಮುಂದೆ ಹೆಚ್ಚಿನ ಭದ್ರತೆ ಗೆ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ.

 

25 ಎಎಸೈ, 5 ಪಿಎಸೈ, 3 ಇನ್ಸ್ಪೆಕ್ಟರ್, 150 ಕಾನ್ಸಸ್ಟೇಬಲ್ , 6 ಡಿಎಆರ್ ತುಕಡಿ, 3 ಕೆಎಸ್ ಆರ್ ಪಿ ನೇಮಿಸುವುದರ ಜೊತೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.

 

ಇದು ಪ್ರೀತಿಯ ಸೇಡು..!??

 

ಅಯ್ನಾಸ್​ ಮತ್ತು ಪ್ರವೀಣ್ ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಅಯ್ನಾಜ್ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದಳು. ಪ್ರವೀಣ್ ಚೌಗಲೆ ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರೂ ಆಗಿದ್ದನು. ಪರಸ್ಪರ ದ್ವೇಷ ಅಥವಾ ಏಕಮುಖ ಪ್ರೀತಿಯಿಂದ ಆರೋಪಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 

ಸಂಬಂಧಿಯ ಮನೆಯಲ್ಲಿದ್ದ ಆರೋಪಿ

 

ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಉಡುಪಿ, ಬೆಳಗಾವಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಮೊಬೈಲ್ ಫೋನ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಹಿಡಿದಿದ್ದಾರೆ. ಆರೋಪಿ ಬೆಳಗಾವಿಯ ತನ್ನ ಸಂಬಂಧಿಯ ಮನೆಯಲ್ಲಿ ತಂಗಿದ್ದನು ಎಂದು ಬಂಧನದ ಬಳಿಕ ತಿಳಿದುಬಂದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version