ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಸೇವಾ ಸೌರಭ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

Published

on

 

  • ಎಲ್ಲರೂ ಸೇರಿದ ಕಾರಣ ಕಾರ್ಯಕ್ರಮ ಯಶಸ್ವಿಯಾಗಿದೆ: ಅಶೋಕ್ ರೈ

 

ಪುತ್ತೂರು: ನವಂಬರ್ 13 ರಂದು ರೈ ಎಸ್ಟೇಟಗ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ವಸ್ತ್ರ ವಿತರಣಾ ಹಾಗೂ ಸಜಭೋಜನ, ಗುಡುದೀಪ ಸ್ಪರ್ಧೆ ಕಾರ್ಯಕ್ರಮ ಯಸಶ್ವಿಯಾಗಲು ಟ್ರಸ್ಟಿನ ಸದಸ್ಯರು ಹಾಗೂ ಕಾರ್ಯಕರ್ತರ ಶ್ರಮವೇ ಕಾರಣವಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷರೂ ಶಾಸಕರಾದ ಅಶೋಕ್ ರೈ ಹೇಳಿದರು.

ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.

ಕಾರ್ಯಕರ್ತರು ಪ್ರತೀ ಗ್ರಾಮಕ್ಕೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು, ಅಚ್ಚುಕಟ್ಟಾದ ವೇದಿಕೆ ವ್ಯವಸ್ಥೆ, ಸಭಾಂಗಣ,ಪ್ರಚಾರ, ಊಟೋಪಚಾರದ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿ ನಡೆದಿದ್ದು ಇದಕ್ಕೆ ಕಾರಣ ಕರ್ತರಾದ ಎಲ್ಲರೂ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕರು ಹೇಳಿದರು.

 

ಸ್ಪೀಕರ್ ಯು.ಟಿ..ಖದರ್ ಗೂ ಅಚ್ಚರಿಯಾಗಿತ್ತು

ಕಾರ್ಯಕ್ರಮದಲ್ಲಿ‌ಭಾಗವಹಿಸಿದ್ದ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ರವರು ಕಾರ್ಯಕ್ರಮದಿಂದ ತೆರಳಿದ ಬಳಿಕ ಮೊಬೈಲ್ ಕರೆ ಮಾಡಿ ಇಷ್ಟೊಂದು ಜನ ಸೇರುವ ಕಾರ್ಯಕ್ರಮವಾಗಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಈ ಕಾರ್ಯಕ್ರಮಕ್ಕೆ ಸೀಎಂ ಅವರನ್ನೇ ಕರೆಸಬೇಕಿತ್ತು. ಅಷ್ಟು ಜನ ಸೇರಿದ್ದರೂ ಎಲ್ಲವೂ ಅಚ್ಚುಕಟ್ಟಾಗಿ ನಡೆದಿರುವುದು ಅದ್ಬುತವಾಗಿದೆ ಎಂದು ನನಗೆ ಹೇಳಿದ್ದರು ಎಂದು ಶಾಸಕರು ಸಭೆಗೆ ತಿಳಿಸಿದರು.

ಡಿಸಿಸಿ ಅಧ್ಯಕ್ಷ ರಾದ ಹರೀಶ್ ಕುಮಾರ್ ರವರು ಕೂಡಾ ಕರೆ ಮಾಡಿ ಬಡವರಿಗೆ ಸನ್ಮಾನ ಮಾಡಿರುವುದು ಉತ್ತಮ ಕೆಲಸವಾಗಿದೆ. ಈ ರೀತಿಯ ಕಾರ್ಯಕ್ರಮ ರಾಜ್ಯದಲ್ಲಿ ಎಲ್ಲಿಯೂ ನಡೆಯುವುದಿಲ್ಲ. ರೈ ಟ್ರಸ್ಟ್ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಬಂದಿದ್ದೇನೆ, ಅಚ್ಚರಿಯಾಗಿದೆ ಎಂದು ಹೇಳಿ ಅಭಿನಂದಿಸಿದ್ದಾರೆ ಎಂದು ಶಾಸಕರು‌ ಸಭೆಯಲ್ಲಿ‌ಮೆಲುಕು ಹಾಕಿದರು.

 

ಮುಂದಿನ ವರ್ಷವೂ ಅದ್ದೂರಿ ಕಾರ್ಯಕ್ರಮ

ಮುಂದಿನ ದೀಪಾವಳಿಗೂ ಬಡವರ ಜೊತೆ ಸೇರಿಕೊಂಡು ಅದ್ದೂರಿಯ ಕಾರ್ಯಕ್ರಮ ಮಾಡಲಿದ್ದೇವೆ. ವರ್ಷದಲ್ಲಿ‌ 5 ರಿಂದ 6 ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿದೆ. ಜನರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದು ಶಾಸಕರು ಹೇಳಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version