Connect with us

ಕಾನೂನು

ಬಂಟ್ವಾಳ; ಹೆಲ್ಕೆಟ್ ಧರಿಸಿ ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿದ ಕಳ್ಳ.

Published

on

ಬಂಟ್ವಾಳ; ಹೆಲ್ಕೆಟ್ ಧರಿಸಿದ ಕಳ್ಳನೊಬ್ಬ ಅಂಗಡಿಗಳಲ್ಲಿ ಕಳ್ಳತನ ಮಾಡಿದ ಘಟನೆ ಬಿಸಿರೋಡಿನ ಕೈಕಂಬ ಎಂಬಲ್ಲಿ ನಡೆದಿದೆ.ಭಾನುವಾರ ರಾತ್ರಿ ಬಿ.ಸಿ.ರೋಡಿನ ಕೈಕಂಬದಲ್ಲಿ ಒಟ್ಟು 12 ಅಂಗಡಿಗಳಿಗೆ ಕಳ್ಳ ನುಗ್ಗಿದ್ದಾನೆ. ಇದರಲ್ಲಿ ಮೂರು ಅಂಗಡಿಗಳಿಂದ ಸುಮಾರು 61 ಸಾವಿರ ರೂ ಕಳವು ಮಾಡಿದ್ದಾನೆ.

ಇಲ್ಲಿನ ಡಿಶ್ ಟಿ.ವಿ .ರಿಚಾರ್ಜ್‌ ಅಂಗಡಿಯೊಂದರಲ್ಲಿ ಇಡಲಾಗಿದ್ದ ಸುಮಾರು 52 ಸಾವಿರ ನಗದು, ಸಾಯಿ ಲೀಲಾ ಹೋಟೆಲ್ ನ 6 ಸಾವಿರ ಹಾಗೂ ಇನ್ನೊಂದು ಅಂಗಡಿಯಿಂದ 3 ಸಾವಿರ ರೂ ನಗದು ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಕಳ್ಳರು ಇಲ್ಲಿನ ಹೊಟೇಲ್‌, ಸಹಕಾರಿ ಸಂಘಗಳ ಕಚೇರಿ ಸಹಿತ ಮತ್ತಿತರ ಅಂಗಡಿಗಳಿಗೆ ನುಗ್ಗಿ ಏನೂ ಸಿಗದೇ ಬರಿಗೈಯಲ್ಲಿ ವಾಪಾಸ್ಸಾಗಿದ್ದಾನೆ.ಇನ್ನು ಕಳ್ಳ ಬೈಕಿನಲ್ಲಿ ಬಂದು ಅಬಳಿಕ ಹೆಲ್ಮಟ್ ಧರಿಸಿ ಅಂಗಡಿಗಳಿಗೆ ನುಗ್ಗಿದ ಬಗ್ಗೆ ಇಲ್ಲಿನ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ. ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ,ಕಳ್ಳ ನಿಗಾಗಿ ಬಲೆ ಬೀಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement