Connect with us

ಕಾನೂನು

ವಿವಾಹ ಮಾಡಿಸುವುದಾಗಿ ಕೇರಳ ಮೂಲದ ನಿವೃತ್ತ ಯೋಧನಿಗೆ ವಂಚನೆ;ಕೊಡಗು ಪೊಲೀಸರಿಂದ ದ.ಕ. ಜಿಲ್ಲೆಯ ಇಬ್ಬರು ಅರೆಸ್ಟ್

Published

on

ಮಡಿಕೇರಿ: ಕೇರಳ ಮೂಲದ 64 ವರ್ಷ ವಯಸ್ಸಿನ ವ್ಯಕ್ತಿಗೆ ನಿವೃತ್ತ ಯೋಧನಿಗೆ ವಿವಾಹ ಮಾಡಿಸುವುದಾಗಿ ನಂಬಿಸಿ ವಂಚನೆ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ನಿವೃತ್ತ ಯೋಧ ಜಾನ್ ಮ್ಯಾಥ್ಯ ಎಂಬವರನ್ನು ಆರೋಪಿಗಳು ನವೆಂಬರ್ 26 ರಂದು ಮಡಿಕೇರಿಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ.ಹೋಂ ಸ್ಟೇ ಒಂದರಲ್ಲಿ ಮಹಿಳೆಯನ್ನು ತೋರಿಸಿ ಆಕೆಯ ಜೊತೆಗೆ ಜಾನ್ ಮ್ಯಾನ್ಯೂ ಫೋಟೋ ತೆಗೆದುಕೊಂಡಿದ್ದ ಆರೋಪಿಗಳು ಬಳಿಕ ಫೋಟೋ ತೋರಿಸಿ ಬ್ಲಾಕ್ ಮೇಲ್ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಆರೋಪಿಗಳು 8 ಲಕ್ಷ ರೂಪಾಯಿ ನಗದು ಮತ್ತು 2 ಲಕ್ಷ ರೂಪಾಯಿಯ ಚೆಕ್ ಪಡೆದಿದ್ದಾರೆ ಎಂದು ಜಾನ್ ಮ್ಯಾಥ್ಯ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಬ್ಬರು ಆರೋಪಿಗಳಾದ ಬಂಟ್ವಾಳದ ಅಬ್ದುಲ್‌ ಬಷೀ‌ರ್ (30) ಮತ್ತು ಕಡಬ ನಿವಾಸಿ ಸಾದಿಕ್(29) ಎಂಬವರನ್ನು ಬಂಧಿಸಿರುವ ಪೊಲೀಸರು 1.05 ಲಕ್ಷ ರೂಪಾಯಿ ನಗದು ಮತ್ತು ಚೆಕ್ ವಶಪಡಿಸಿಕೊಂಡಿದ್ದಾರೆ.

ಇನ್ನಿಬ್ಬರು ಆರೋಪಿಗಳ ಪೈಕಿ ಫೈಸಲ್ ಎಂಬಾತ ಬೇರೆ ಪ್ರಕರಣವೊಂದರಲ್ಲಿ ಈಗಾಗಲೇ ಬಂಧಿತನಾಗಿದ್ದು, ಅಮೀರ್ ಎಂಬಾತ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement