Connect with us

ಸ್ಥಳೀಯ

ಬೆಳ್ತಂಗಡಿ ಕುವೆಟ್ಟಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು

Published

on

ಬೆಳ್ತಂಗಡಿ; ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟಿನಲ್ಲಿ ನಡೆದಿದೆ. ಕುವೆಟ್ಟು ಗ್ರಾಮದ ಬೆಳ್ತಂಗಡಿ ನಿವಾಸಿ ಸುಲೈಮಾನ್ ಅವರ ಮನೆಯಲ್ಲಿ 09.12.2023 ರ ಸಂಜೆಯಿಂದ ದಿನಾಂಕ;10.12.2023 ರವರೆಗೆ ಮನೆಯಲ್ಲಿ ಯಾರೂ ಇರಲಿಲ್ಲ.

ಈ ವೇಳೆ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿನ ಲಾಕ್ ನ್ನು ಮುರಿದು ಒಳಪ್ರವೇಶಿಸಿ ಬೆಡ್ ರೂಮಿನ ಕಪಾಟಿನ ಬಾಗಿಲು ಮುರಿದು ಒಟ್ಟು 69 ½ ಗ್ರಾಂ ತೂಕದ ಚಿನ್ನಾಭರಣ ಹಾಗೂ 40,000 ನಗದು ಹಣವನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಕಳವಾದ ಚಿನ್ನಾಭರಣದ ಒಟ್ಟು ಮೌಲ್ಯ 3,87,500 ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಅಕ್ರ 119/2023 ಕಲಂ,457,454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement