ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಡಿ.26 ಒಕ್ಕಲಿಗ ಗೌಡ ಸೇವಾ ಸಂಘ (ರಿ) ಕಡಬ ತಾಲೂಕಿನ ನೂತನ ಸಭಾ ಭವನದ ಶಂಕುಸ್ಥಾಪನೆ.

Published

on

ಕಡಬ : ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿ ಸುಮಾರು 15 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ, ತಾಲೂಕು ಸಮಿತಿಯ ನೂತನ ಸಮಿತಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಡಿ.26 ರಂದು ಮಂಗಳವಾರ ನಡೆಯಲಿದೆ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು ಹೇಳಿದರು.ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಬಹುದೊಡ್ಡ ಯೋಜನೆಯಾದ ಸಮುದಾಯ ಭವನ ನಿರ್ಮಾಣಕ್ಕಾಗಿ ಹೊಸಮಠದಲ್ಲಿ ಈಗಾಗಲೇ 1.30 ಲಕ್ಷ ರೂ.ನಲ್ಲಿ ಮೂರು ಎಕರೆ ಜಾಗ ಖರೀಸಿದಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಸಮತಟ್ಟುಗೊಳಿಸಲಾಗಿದೆ, ಆಧುನಿಕ ಸೌಲಭ್ಯವಿರುವ ಸುಸಜ್ಜಿತ ಭವನ ನಿಮಾಣ ಮಾಡಲು ನೀಲನಕಾಶೆ ತಯಾರಿಸಲಾಗಿದೆ ಎಂದರು.

ಸಂಘದ ವತಿಯಿಂದ ಮುಂದೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗುತ್ತಿದ್ದು, ಹಿಂದುಳಿದ ನಮ್ಮ ಸಮುದಾಯದ ಎಲ್ಲ ವರ್ಗದ ಜನರಿಗೆ ಸಾಮಾನ್ಯ ಮತ್ತು ತಾಂತ್ರಿಕ ಹಾಗೂ ಉನ್ನತ ಶಿಕ್ಷಣ ನೀಡುವುದು ಹಾಗೂ ತಾಲೂಕು ಕೇಂದ್ರವಾದ ಕಡಬದಲ್ಲಿ ಅತ್ಯಾಧುನಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಮುದಾಯ ಆರ್ಥಿಕ ಸ್ವಾವಲಂಬನೆಗಾಗಿ ಸ್ಪಂದನಾ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ, ಆರೋಗ್ಯ ಸೌಲಭ್ಯ, ಆರೋಗ್ಯ ವಿಮೆ, ಕ್ರೀಡೆ ಹಾಗೂ, ವ್ಯಕ್ತಿತ್ವ ವಿಕಸನ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮುಂತಾದ ಕಾರ್ಯಕ್ರಮಗಳೊಂದಿಗೆ ಪರವೂರಿನಲ್ಲಿರುವ ಸಮುದಾಯದ ಬಾಂಧವರನ್ನು ಬೆಸೆಯುವ ಕಾರ್ಯಗಳನ್ನು ಮಾಡಲು ಉದ್ಧೇಶಿಸಲಾಗಿದೆ.ಒಕ್ಕಲಿಗೆ ಸೇವಾ ಸಂಘವನ್ನು ಬಲಪಡಿಸುವ ಉದೇಶದಿಂದ ಬೈಲುವಾರು ಸಮಿತಿ, ಗ್ರಾಮ ಸಮಿತಿ, ಮಹಿಳಾ ಘಟಕ ತರುಣ ಸಮಿತಿಗಳನ್ನು ರಚನೆ ಮಾಡಲಾಗುತ್ತಿದೆ.

ತಾಲೂಕಿನ 42 ಗ್ರಾಮಗಳಿಂದ ಹೊರೆಕಾಣಿಕೆಯನ್ನು ಸಂಗ್ರಹಿಸಿ ಕಡಬ ಮಹಾಗಣಪತಿ ಶ್ರೀಕಂಠ ಸ್ವಾಮಿ ದೇವಸ್ಥಾನದಲ್ಲಿಟ್ಟು ಡಿ.25 ರಂದು ಅಪರಾಹ್ನ ಭವ್ಯ ಮೆರವಣಿಗೆಯಲ್ಲಿ ಹೊಸಮಠದ ನಿವೇಶನಕ್ಕೆ ಹೋಗಲಿದ್ದೇವೆ. ಡಿ.26 ರಂದು ಬೆಳಿಗ್ಗೆ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಸ್ಪಂದನಾ ಸಹಕಾರ ಸಂಘವನ್ನು ಉದ್ಘಾಟಿಸಲಿದ್ದಾರೆ. ಬಳಿಕ ನಿರ್ಮಾಲಾನಂದ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಬೃಹತ್ ವಾಹನಜಾಥಾದೊಂದಿಗೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ಅಲ್ಲಿ ಆರಂಭದಲ್ಲಿ ತಾಲೂಕು ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ, ಸ್ವಾಮೀಜಿಯವರಿಂದ ಶಿಲಾನ್ಯಾಸ ಹಾಗೂ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸುರೇಶ್ ಬೈಲು ವಿವರಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಎಚ್.ಡಿ ಕುಮಾರಸ್ವಾಮಿ, ವಿರೋಧಪಕ್ಷದ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಉನ್ನತಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಹನುಮಂತಯ್ಯ, ಚಿತ್ರನಟ, ರಾಜ್ಯ ಸಭಾ ಸದಸ್ಯ ಜಗ್ಗೇಶ್, ಶಾಸಕರಾದ ಪ್ರಿಯಾಕೃಷ್ಣ, ಬೋಜೇ ಗೌಡ, ಮಂತರ್ ಗೌಡ, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಸುರೇಶ್ ಗೌಡ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಪ್ರಶಾಂತ್ ಗೌಡ ಪಂಜೋಡಿ, ಕೋಶಾಧಿಕಾರಿ ಶಿವಪ್ರಸಾದ್ ಗೌಡ ಪುತ್ತಿಲ, ಸಂಘಟನಾಕಾರ್ಯದರ್ಶಿ ಶಿವರಾಮ ಗೌಡ ಏನೆಕಲ್ಲು, ಮುಖಂಡರಾದ ರಂಜಿತ್ ಪದಕಂಡ, ಸೀತಾರಾಮ ಗೌಡ ಪೊಸವಳಿಕೆ, ಚಂದ್ರಶೇಖರ ಗೌಡ ಕೋಡಿಬೈಲು ಉಪಸ್ಥಿತರಿದ್ದರು.


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version