ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ, ದುಶ್ವಟ ಗಳಿಗೆ ಯಾರು ಬಲಿಯಾಗಬಾರದು, ತಂದೆ ತಾಯಿಯವರ ಹೆಸರನ್ನು ಕೆಡಿಸುವ ಕೆಲಸ ಎಂದೂ ಮಾಡಬೇಡಿ : ಅಶೋಕ್ ಕುಮಾರ್ ರೈ

Published

on

ಪುತ್ತೂರು: ದ 18,ಮಕ್ಕಳನ್ನು ತಿದ್ದುವ ಮತ್ತು ಅವರಿಗೆ ಉತ್ತಮ ದಾರಿ ತೋರಿಸುವ ಕೆಲಸ ಕೇವಲ ಶಿಕ್ಷಕರು‌ಮಾತ್ರವಲ್ಲ ಪೋಷಕರಿಂದಲೂ ಆಗಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಬೆಳಿಯೂರು ಕಟ್ಟೆ ಸರಕಾರಿ ಪ ಪೂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.



ಸರಕಾರಿ ಶಾಲೆಯಲ್ಲಿ ಶಿಸ್ತು ಕಡಿಮೆ ಎಂದು ಕೆಲವರು ಆಪಾದನೆ ಮಾಡುತ್ತಾರೆ. ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಶಿಸ್ತು ಪಾಲನೆ ಮಾಡಬೇಕಾದರೆ ಪೋಷಕರ ಸಹಕಾರ ಅತೀ ಅಗತ್ಯವಾಗಿದೆ.
ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡುವ ಕನಸು ಕಾಣಬೇಕು. ಕನಸೇ ಕಾಣದಿದ್ದರೆ ನನಸು ಮಾಡುವುದಾದರೂ ಏನನ್ನಯ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು,ದುಶ್ಚಟಗಳಿಗೆ ಯಾರೂ ಬಲಿಯಾಗಬಾರದು. ತಂದೆ ತಾಯಿಯ ಹೆಸರನ್ನು ಕೆಡಿಸುವ ಕೆಲಸವನ್ನು ಎಂದೂ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎರಡು ಗ್ರಾಮಕ್ಕೊಂದು ಕೆಪಿಎಸ್ ಸ್ಕೂಲ್
ಎರಡು ಗ್ರಾಮಕ್ಕೊಂದು ಕೆಪಿಎಸ್ ಸ್ಕೂಲ್ ಆರಂಭ ಮಾಡುವ ಉದ್ದೇಶ ಸರಕಾರಕ್ಕಿದ್ದು ,ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಖ್ಯ ಶಾಲೆಗೆ ಮರ್ಜಿ ಮಾಡಲಾಗುವುದು ಎಂದು ಹೇಳಿದರು.

15 ತಿಂಗಳಲ್ಲಿ 24 ಗಂಟೆಯೂ ನೀರು
ಮುಂದಿನ 15 ತಿಂಗಳೊಳಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ದಿನದ 24 ಗಂಟೆ ನೀರು ವಿತರಣೆಯಾಗಲಿದೆ ಎಂದು ಶಾಸಕರು ತಿಳಿಸಿದರು.


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version