ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

LED ಕಂಬಕ್ಕೆ ಢಿಕ್ಕಿ ಹೊಡೆದ ಕೇರಳ ಸರ್ಕಾರಿ ಬಸ್…6 ಪ್ರಯಾಣಿಕರಿಗೆ ಗಾಯ…

Published

on

ಹುಣಸೂರು.ಡಿ.21.ಚಾಲಕನ ನಿಯಂತ್ರಣ ತಪ್ಪಿದ ಕೇರಳ ಸರ್ಕಾರಿ ಬಸ್ ಎಲ್.ಇ.ಡಿ.ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ 6 ಪ್ರಯಾಣಿಕರು ಗಾಯಗೊಂಡ ಘಟನೆ ಹುಣಸೂರು ಟೌನ್ ಅರಸು ಪ್ರತಿಮೆ ವೃತ್ತದ ಬಳಿ ನಡೆದಿದೆ.ಸುಮಾರು 30 ಪ್ರಯಾಣಿಕರನ್ನು ಹೊಂದಿದ್ದ ಸರ್ಕಾರಿ ಬಸ್ ಕೇರಳ ದಿಂದ ಗೋಣಿಕೊಪ್ಪ ಮೂಲಕ ಬೆಂಗಳೂರಿಗೆ ತೆರಳುತ್ತಿತ್ತು.ಮುಂಜಾನೆ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಂಬಕ್ಕೆ ಢಿಕ್ಕಿ ಹೊಡೆದಿದೆ.ಬಸ್ ನಲ್ಲಿದ್ದ 6 ಪ್ರಯಾಣಿಕರು ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ. ಹಾಗೂ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದೇವೇಂದ್ರ.ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version