ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ಅಡಿಕೆ ಆಮದು ಬಗ್ಗೆ ರೈತ ಮುಖಂಡರು ಶಾಸಕರ ಭೇಟಿ. ರೈತರ ಸ್ಪಂದನೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಅಶೋಕ್ ಕುಮಾರ್ ರೈ ಅಡಿಕೆ ಆಮದು ತಡೆಕಟ್ಟುವ ಬಗ್ಗೆ ಕೇಂದ್ರದ ಸಚಿವರೊಂದಿಗೆ ಹಾಗೂ ಸ್ಥಳೀಯ ಸಂಸದರೊಂದಿಗೆ ಚರ್ಚಿಸುವೆ.

Published

on

ಪುತ್ತೂರು: ಬರ್ಮಾ ದೇಶದಿಂದ ಅಡಿಕೆ ಆಮದಾಗುತ್ತಿರುವುದರಿಂದ ಅಡಿಕೆ ಕೃಷಿಕರು ಸಂಕಷ್ಟಗೊಳಗಾಗುತ್ತಿದ್ದು ತಕ್ಷಣ ಆಮದನ್ನು ನಿಲ್ಲಿಸಲು ಕೇಂದ್ರ ಸರಕಾರಕ್ಕೆ ಸರಕಾರದ ಮೂಲಕ ಒತ್ತಡ ಹಾಕಬೇಕೆಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದಲ್ಲಿ ಶಾಸಕ ಅಶೋಕ್ ಕುಮಾರ್ ರೈರವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬರ್ಮಾದ ಅಡಿಕೆಯನ್ನು ಶಾಸಕರಿಗೆ ಪ್ರದರ್ಶಿಸಿದರು.
ದ.ಕ.ಜಿಲ್ಲೆಯ ಹೆಚ್ಚಿನ ಜನರು ಅಡಿಕೆ ಕೃಷಿಯನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇತ್ತೀಚೆಗೆ ಸುಮಾರು ದಿನಗಳಿಂದ ಅಡಿಕೆ ಬೆಲೆಧಾರಣೆ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದು ದ.ಕ.ಜಿಲ್ಲೆ ಸೇರಿದಂತೆ ಅಡಿಕೆ ಬೆಳೆಯುವವರಾಗಿದ್ದು ಈಗ ಧಾರಣೆ ಏರಿಳಿತವು ಕೃಷಿಕರ ಮನಸ್ಸಿನಲ್ಲಿ ಆತಂಕ ಸೃಷ್ಟಿಸಿ ರೈತರಿಗೆ ದಿಕ್ಕು ತೋಚಂದಂತಾಗಿದೆ ಬರ್ಮಾದಿಂದ ಆಮದಾಗುತ್ತಿರುವ ಅಡಿಕೆಯಿಂದ ರೈತಾಪಿ ವರ್ಗದವರು ಕೇಂದ್ರ ಸರಕಾರದ ಈ ಧೋರಣೆಯಿಂದ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.



ಆದುದರಿಂದ ಕೇಂದ್ರ ಸರಕಾರವು ವಿದೇಶದಿಂದ ಅಡಿಕೆ ಆಮದು ಮಾಡುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಸರಕಾರಕ್ಕೆ ಒತ್ತಡ ಹಾಕುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದಿಸಿದ ಅಶೋಕ್ ಕುಮಾರ್ ರೈರವರು ಈ ಬಗ್ಗೆ ಸರಕಾರದ ಗಮನ ಸೆಳೆದು ಸಂಬಂದಪಟ್ಟವರಿಗೆ ವಿವರಿಸಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ ಜೈನ್, ಮುರಳೀಧರ ರೈ ಮಠಂತಬೆಟ್ಟು ನಿರ್ದೇಶಕರಾದ ಸುಬ್ರಹ್ಮಣ್ಯ ಕೊಡಿಪ್ಪಾಡಿ, ನಿರಂಜನ ರೈ ಮಠಂತಬೆಟ್ಟು, ಕೇಶವ ಕೃಪ, ಜಯಪ್ರಕಾಶ್ ಬದಿನಾರು. ವಿಕ್ರಂ ಶೆಟಿ ಅಂತರ, ಶಿವಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version